ಮಧ್ಯಾಹ್ನದ ಊಟಕ್ಕೆ ತುಂಬಾ ಲೈಟ್ ಆಗಿರೋ ಆದರೆ ಹೊಟ್ಟೆ ತುಂಬಿಸುವಂತಹ ಸಾರು ಬೇಕೆನಿಸಿದರೆ ಕಡಲೆಬೇಳೆ ಸಾರು ಉತ್ತಮ ಆಯ್ಕೆ. ಪ್ರೋಟೀನ್ ಸಮೃದ್ಧವಾದ ಕಡಲೆಬೇಳೆ, ಸಾರು ರೂಪದಲ್ಲಿ ಅನ್ನಕ್ಕೆ ಸೇರಿದಾಗ ಊಟಕ್ಕೆ ಒಳ್ಳೆಯ ಸಮತೋಲನ ನೀಡುತ್ತದೆ.
ಬೇಕಾಗುವ ಸಾಮಗ್ರಿಗಳು:
ಕಡಲೆಬೇಳೆ – 1 ಕಪ್
ಈರುಳ್ಳಿ – 1
ಟೊಮೆಟೊ – 1
ಹಸಿಮೆಣಸು – 1
ಬೆಳ್ಳುಳ್ಳಿ – 3–4 ಕಾಳು
ಕಸೂರಿ ಮೇಥಿ – ಸ್ವಲ್ಪ
ಸಾಂಬಾರ್ ಪುಡಿ – 1½ ಟೀಸ್ಪೂನ್
ಅರಿಶಿನ ಪುಡಿ – ½ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಟೀಸ್ಪೂನ್
ಸಾಸಿವೆ – ½ ಟೀಸ್ಪೂನ್
ಜೀರಿಗೆ – ½ ಟೀಸ್ಪೂನ್
ಕರಿಬೇವು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ತಯಾರಿಸುವ ವಿಧಾನ:
ಮೊದಲು ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್‌ನಲ್ಲಿ ಸಾಕಷ್ಟು ನೀರು ಹಾಕಿ ಬೇಯಿಸಿಕೊಳ್ಳಿ.
ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ ಸಿಡಿಸಿದ ನಂತರ ಕರಿಬೇವು, ಹಸಿಮೆಣಸು ಮತ್ತು ಬೆಳ್ಳುಳ್ಳಿ ಹಾಕಿ ಸ್ವಲ್ಪ ಹುರಿಯಿರಿ. ನಂತರ ಈರುಳ್ಳಿ ಹಾಕಿ ಫ್ರೈ ಮಾಡಿ. ಟೊಮೆಟೊ ಸೇರಿಸಿ ಮೃದುವಾಗುವವರೆಗೆ ಕುದಿಯಲು ಬಿಡಿ.
ಈಗ ಅರಿಶಿನ ಪುಡಿ, ಸಾಂಬಾರ್ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಬೇಯಿಸಿದ ಕಡಲೆಬೇಳೆಯನ್ನು ಸೇರಿಸಿ ಅಗತ್ಯವಿದ್ದರೆ ಸ್ವಲ್ಪ ನೀರು ಹಾಕಿ 5–7 ನಿಮಿಷ ಸಾರು ಕುದಿಯಲು ಬಿಡಿ. ಕೊನೆಯಲ್ಲಿ ಕಸೂರಿ ಮೇಥಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಗ್ಯಾಸ್ ಆಫ್ ಮಾಡಿ.


