Tuesday, November 25, 2025

FOOD | ರುಚಿಕರವಾಗಿ ಬೆಂಡೆಕಾಯಿ ಪಲ್ಯ ಮಾಡೋದು ಹೇಗೆ ಗೊತ್ತಾ? ಈ ರೆಸಿಪಿ ನೋಡಿ

ಬೆಂಡೆಕಾಯಿ ಪಲ್ಯ ಎಂದರೆ ಮನೆಯಲ್ಲಿ ಯಾವಾಗ ಬೇಕಾದರೂ ತ್ವರಿತವಾಗಿ ಮಾಡಬಹುದಾದ, ರುಚಿ ಮತ್ತು ಆರೋಗ್ಯ ಎರಡನ್ನೂ ಒಟ್ಟಿಗೆ ನೀಡುವ ಸೈಡ್ ಡಿಶ್. ಅನ್ನಕ್ಕಾಗಲೀ ರೊಟ್ಟಿಗಾಗಲೀ ಹೊಂದುವ ಈ ಪಲ್ಯ ವಿಶೇಷವಾಗಿ ಡಯಟ್ ಪಾಲಿಸುತ್ತಿರುವವರಿಗೆ ಉತ್ತಮ.

ಬೇಕಾಗುವ ಸಾಮಗ್ರಿಗಳು:

ಬೆಂಡೆಕಾಯಿ – 250 ಗ್ರಾಂ
ಎಣ್ಣೆ – 2 ಟೀಸ್ಪೂನ್
ಸಾಸಿವೆ – ½ ಟೀಸ್ಪೂನ್
ಜೀರಿಗೆ – ½ ಟೀಸ್ಪೂನ್
ಕರಿಬೇವು – 1 ದಿಂಡು
ಹಸಿಮೆಣಸಿನಕಾಯಿ – 2
ಹುಳಿ ಪುಡಿ – ½ ಟೀಸ್ಪೂನ್
ಕೆಂಪು ಮೆಣಸು ಪುಡಿ – 1 ಟೀಸ್ಪೂನ್
ಅರಿಶಿನ – ¼ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ – ಸ್ವಲ್ಪ

ತಯಾರಿಸುವ ವಿಧಾನ:

ಮೊದಲು ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಒರೆಸಿ, ಒಣಗಿಸಿ ಸಣ್ಣ ತುಂಡುಗಳಾಗಿ ಕತ್ತರಿಸಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ, ಕರಿಬೇವು ಮತ್ತು ಹಸಿಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ. ಈಗ ಕತ್ತರಿಸಿದ ಬೆಂಡೆಕಾಯಿ ಸೇರಿಸಿ ಮಧ್ಯಮ ತಾಪದಲ್ಲಿ ಚೆನ್ನಾಗಿ ಹುರಿಯಿರಿ. ಬೆಂಡೆಕಾಯಿ ಸ್ವಲ್ಪ ಮೃದುವಾದ ನಂತರ ಅರಿಶಿನ, ಮೆಣಸಿನ ಪುಡಿ, ಹುಳಿ ಪುಡಿ ಮತ್ತು ಉಪ್ಪು ಸೇರಿಸಿ ಕಲಸಿ.

ಮಸಾಲೆ ಬೆಂಡೆಕಾಯಿಗೆ ಚೆನ್ನಾಗಿ ಲೇಪಾಗುವಂತೆ 5–7 ನಿಮಿಷ ಬೇಯಿಸಿ. ಗ್ಯಾಸ್ ಆಫ್ ಮಾಡಿದ ನಂತರ ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಬಿಸಿ ಸರ್ವ್ ಮಾಡಿ.

error: Content is protected !!