January22, 2026
Thursday, January 22, 2026
spot_img

FOOD | ಎಗ್ ಬಟರ್ ಗಾರ್ಲಿಕ್ ಫ್ರೈ! ರುಚಿ ನೋಡಿ ಕಳೆದೇ ಹೋಗ್ತೀರ ಪಕ್ಕಾ

ಲಂಚ್ ಗೆ ಪ್ರತಿದಿನ ಅದೇ ಸಾರು, ಪಲ್ಯ ತಿಂದು ಬೋರ್ ಆಗಿಬಿಟ್ಟಿದೆಯಾ? ಹಾಗಿದ್ರೆ ಈ ಎಗ್ ಬಟರ್ ಗಾರ್ಲಿಕ್ ಫ್ರೈ ಪರ್ಫೆಕ್ಟ್. ಬಟರ್‌ನ ರಿಚ್ ಟೇಸ್ಟ್, ಬೆಳ್ಳುಳ್ಳಿಯ ಘಮಘಮ ಸುವಾಸನೆ ಮತ್ತು ಮೊಟ್ಟೆಯ ಸಾಫ್ಟ್ ಟೆಕ್ಸ್ಚರ್ ಈ ಡಿಶ್‌ನ್ನು ಸಾಮಾನ್ಯ ಫ್ರೈಯಿಂದ ಸ್ಪೆಷಲ್ ಲಂಚ್ ರೆಸಿಪಿಯಾಗಿ ಮಾಡುತ್ತೆ.

ಬೇಕಾಗುವ ಪದಾರ್ಥಗಳು

ಬೇಯಿಸಿದ ಮೊಟ್ಟೆ – 5 (3 ಸಂಪೂರ್ಣ ಮೊಟ್ಟೆ, 2 ಮೊಟ್ಟೆಯ ಹಳದಿ ಮಾತ್ರ)
ಬಟರ್ – 2 ಟೇಬಲ್‌ಸ್ಪೂನ್
ಬೆಳ್ಳುಳ್ಳಿ – 10–12 ಎಸಳು
ಈರುಳ್ಳಿ – 1
ಹಸಿಮೆಣಸು – 2
ಕರಿಬೇವು – ಸ್ವಲ್ಪ
ಕಾಶ್ಮೀರಿ ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಮೆಣಸಿನ ಪುಡಿ – ½ ಟೀಸ್ಪೂನ್
ಕಪ್ಪು ಮೆಣಸು ಪುಡಿ – ½ ಟೀಸ್ಪೂನ್
ಉಪ್ಪು – ರುಚಿಗೆ
ಸೋಯಾ ಸಾಸ್ – 1 ಟೀಸ್ಪೂನ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ತಯಾರಿಸುವ ವಿಧಾನ

ಮೊದಲು ಮೊಟ್ಟೆಗಳನ್ನು ಬೇಯಿಸಿ 2 ಭಾಗ ಮಾಡಿ ಇಡಿ.

ಪ್ಯಾನ್‌ನಲ್ಲಿ ಬಟರ್ ಹಾಕಿ ಕರಗಿದ ನಂತರ ಬೆಳ್ಳುಳ್ಳಿ ಸೇರಿಸಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ.

ಈರುಳ್ಳಿ, ಹಸಿಮೆಣಸು, ಕರಿ ಎಲೆ ಸೇರಿಸಿ ಲೈಟ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ.

ಈಗ ಎಲ್ಲಾ ಪುಡಿಗಳು, ಉಪ್ಪು ಸೇರಿಸಿ ಕಡಿಮೆ ಉರಿಯಲ್ಲಿ ಹುರಿಯಿರಿ. ಕತ್ತರಿಸಿದ ಮೊಟ್ಟೆಗಳನ್ನು ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ.

ಉರಿ ಆಫ್ ಮಾಡಿ, ಈಗ ಮೊಟ್ಟೆಯ ಹಳದಿ (yolk) ಭಾಗ ಸೇರಿಸಿ ಚೆನ್ನಾಗಿ ತಿರುಗಿಸಿ. ಇದೇ ಈ ರೆಸಿಪಿಯ ಸೀಕ್ರೆಟ್ ಕೊನೆಯಲ್ಲಿ ಸೋಯಾ ಸಾಸ್ ಹಾಕಿ ಒಮ್ಮೆ ಮಿಕ್ಸ್ ಮಾಡಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

Must Read