Tuesday, September 23, 2025

FOOD | ಮನೆಮಂದಿಯ ಫೇವರೆಟ್‌ ಹನಿ ಚಿಲ್ಲಿ ಪೊಟೇಟೊ! ಇಲ್ಲಿದೆ ಸಿಂಪಲ್ ರೆಸಿಪಿ

ಹನಿ ಚಿಲ್ಲಿ ಪೊಟೇಟೊ ಒಂದು ಜನಪ್ರಿಯ ಇಂಡೋ-ಚೈನೀಸ್ ಖಾದ್ಯವಾಗಿದೆ. ಸ್ಟಾರ್ಟರ್, ಸ್ನ್ಯಾಕ್ಸ್ ಅಥವಾ ಊಟಕ್ಕೆ ಸೈಡ್ ಡಿಶ್ ಆಗಿ ತಯಾರಿಸಬಹುದು. ನಿಮ್ಮ ಮನೆಯವರನ್ನು ಮೆಚ್ಚಿಸಲು ಈ ರೆಸಿಪಿಯನ್ನು ಟ್ರೈ ಮಾಡಿ.

ಬೇಕಾಗುವ ಪದಾರ್ಥಗಳು:

ಆಲೂಗಡ್ಡೆ – 500 ಗ್ರಾಂ
ಕಾರ್ನ್ ಫ್ಲೋರ್ – 3-4 ಟೀಸ್ಪೂನ್
ಮೈದಾ ಹಿಟ್ಟು – 1-2 ಟೀಸ್ಪೂನ್
ಉಪ್ಪು – ಅರ್ಧ ಟೀಸ್ಪೂನ್
ಎಣ್ಣೆ – ಹುರಿಯಲು ಬೇಕಾದಷ್ಟು
ಕೊಚ್ಚಿದ ಬೆಳ್ಳುಳ್ಳಿ – 4-5 ಹನಿಗಳು
ಕೊಚ್ಚಿದ ಹಸಿರು ಮೆಣಸಿನಕಾಯಿ – 2-3
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಕ್ಯಾಪ್ಸಿಕಂ – 1
ಟೊಮೆಟೋ ಸಾಸ್ – 2 ಟೀಸ್ಪೂನ್
ಚಿಲ್ಲಿ ಸಾಸ್ – 1 ಟೀಸ್ಪೂನ್
ಸೋಯಾ ಸಾಸ್ – 1 ಟೀಸ್ಪೂನ್
ಜೇನುತುಪ್ಪ – 2 ಟೀಸ್ಪೂನ್
ವಿನೆಗರ್ – 1 ಟೀಸ್ಪೂನ್
ನೀರು – ಅರ್ಧ ಕಪ್

ಮಾಡುವ ವಿಧಾನ:

ಆಲೂಗಡ್ಡೆ ತೊಳೆಯಿರಿ, ಸಿಪ್ಪೆ ತೆಗೆಯಿರಿ ಮತ್ತು ಉದ್ದನೇ ಕತ್ತರಿಸಿಕೊಂಡು 10-15 ನಿಮಿಷ ನೀರಿನಲ್ಲಿ ನೆನೆಸಿರಿ, ಬಳಿಕ ಒಣಗಿಸಿ.

ಕಾರ್ನ್ ಫ್ಲೋರ್, ಮೈದಾ ಹಿಟ್ಟು, ಉಪ್ಪು ಸೇರಿಸಿ, ಸ್ವಲ್ಪ ನೀರು ಹಾಕಿ ಮೃದುವಾದ ಹಿಟ್ಟು ತಯಾರಿಸಿರಿ. ಈಗ ಆಲೂಗಡ್ಡೆಯನ್ನು ಈ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ.

ಮತ್ತೊಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ, ಈರುಳ್ಳಿ ಹಾಕಿ ಹುರಿಯಿರಿ. ಕ್ಯಾಪ್ಸಿಕಂ ಸೇರಿಸಿ, 1 ನಿಮಿಷ ಹುರಿಯಿರಿ. ಜೊತೆಗೆ ಟೊಮೆಟೋ ಸಾಸ್, ಚಿಲ್ಲಿ ಸಾಸ್, ಸೋಯಾ ಸಾಸ್, ಜೇನುತುಪ್ಪ, ವಿನೆಗರ್, ನೀರು ಸೇರಿಸಿ 2-3 ನಿಮಿಷ ಬೇಯಿಸಿ.

ಈಗ ಹುರಿದ ಆಲೂಗಡ್ಡೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ನಂತರ ಸ್ಪ್ರಿಂಗ್ ಆನಿಯನ್ ನಿಂದ ಅಲಂಕರಿಸಿ ಬಿಸಿಬಿಸಿಯಾಗಿ ಸರ್ವ್ ಮಾಡಿ.

ಇದನ್ನೂ ಓದಿ