March 12, 2026
Thursday, March 12, 2026
spot_img

FOOD | ನಾಲಿಗೆಗೆ ಹಿತವಾದ ನೆಲ್ಲಿಕಾಯಿ ರಸಂ: ಸಿಂಪಲ್ ರೆಸಿಪಿ ಇದು

ನೆಲ್ಲಿಕಾಯಿ ಅಂದರೆ ವಿಟಮಿನ್‌ C ಸಮೃದ್ಧವಾಗಿರುವ ಒಂದು ಆರೋಗ್ಯಕರ ಹಣ್ಣು. ಸಾಮಾನ್ಯವಾಗಿ ಉಪ್ಪಿನಕಾಯಿ ಅಥವಾ ಚಟ್ನಿಯಾಗಿ ಬಳಸುವ ನೆಲ್ಲಿಕಾಯಿಯಿಂದ ರುಚಿಯಾದ ರಸಂ ಕೂಡ ಮಾಡಬಹುದು.

ಬೇಕಾಗುವ ಸಾಮಗ್ರಿಗಳು

ನೆಲ್ಲಿಕಾಯಿ – 4 ರಿಂದ 5
ತೊಗರಿ ಬೇಳೆ ನೀರು – 1 ಕಪ್
ಟೊಮ್ಯಾಟೊ – 1
ಹಸಿಮೆಣಸು – 1
ರಸಂ ಪುಡಿ – 1 ಚಮಚ
ಅರಿಶಿನ – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಬೆಲ್ಲ – ಚಿಕ್ಕ ತುಂಡು
ಕರಿಬೇವು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ

ಒಗ್ಗರಣೆಗೆ:
ತುಪ್ಪ – 1 ಚಮಚ, ಸಾಸಿವೆ – 1/2 ಚಮಚ, ಜೀರಿಗೆ – 1/2 ಚಮಚ, ಒಣ ಮೆಣಸು – 1, ಬೆಳ್ಳುಳ್ಳಿ (ಐಚ್ಛಿಕ)

ಮಾಡುವ ವಿಧಾನ

ಮೊದಲು ನೆಲ್ಲಿಕಾಯಿಯನ್ನು ಸ್ವಲ್ಪ ನೀರಿನಲ್ಲಿ ಬೇಯಿಸಿ ಬೀಜ ತೆಗೆದು ಮಿಕ್ಸಿಯಲ್ಲಿ ಪೇಸ್ಟ್ ಮಾಡಿಕೊಂಡು ಇಡಿ. ಈಗ ಒಂದು ಪಾತ್ರೆಯಲ್ಲಿ ತೊಗರಿ ಬೇಳೆ ನೀರು, ಟೊಮ್ಯಾಟೊ, ಅರಿಶಿನ, ಉಪ್ಪು, ರಸಂ ಪುಡಿ ಮತ್ತು ನೆಲ್ಲಿಕಾಯಿ ಪೇಸ್ಟ್ ಸೇರಿಸಿ ಕುದಿಯಲು ಬಿಡಿ. ಸ್ವಲ್ಪ ಬೆಲ್ಲ ಹಾಕಿದರೆ ರುಚಿ ಇನ್ನಷ್ಟು ಚೆನ್ನಾಗುತ್ತದೆ.

ರಸಂ ಚೆನ್ನಾಗಿ ಕುದಿಯಲು ಆರಂಭವಾದಾಗ ಗ್ಯಾಸ್ ಆಫ್ ಮಾಡಿ. ನಂತರ ಒಂದು ಚಿಕ್ಕ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಸಾಸಿವೆ, ಜೀರಿಗೆ, ಒಣ ಮೆಣಸು ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿ ರಸಂಗೆ ಸೇರಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿದರೆ ನೆಲ್ಲಿಕಾಯಿ ರಸಂ ಸವಿಯಲು ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !