Sunday, September 21, 2025

FOOD | ಗ್ರೀನ್ ಗ್ರೀನ್ ಪಾಲಕ್ ದೋಸೆ! ಮಕ್ಕಳು ಬೇಡ ಅನ್ನೋಕೆ ಸಾಧ್ಯನೇ ಇಲ್ಲ..

ಪೋಷಕಾಂಶಗಳಲ್ಲಿ ತುಂಬಿರುವ ಪಾಲಕ್‌ ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಲು ಉತ್ತಮ ಆಯ್ಕೆ ಈ ದೋಸೆ. ಇದರಿಂದ ಕೇವಲ ಆರೋಗ್ಯ ಲಾಭವಷ್ಟೇ ಅಲ್ಲದೆ, ಇದರ ಹಸಿರು ಬಣ್ಣ ವಿಶೇಷ ಆಕರ್ಷಣೆ ಕೂಡ ಹೌದು. ಬೆಳಗಿನ ಉಪಹಾರಕ್ಕಾಗಲೀ, ಸಾಯಂಕಾಲದ ಟಿಫಿನ್‌ಗಾಗಲೀ ಈ ಪಾಲಕ್‌ ದೋಸೆ ತುಂಬಾ ರುಚಿಕರವಾದ ಆಯ್ಕೆ.

ಬೇಕಾಗುವ ಸಾಮಗ್ರಿಗಳು:

1 ಕಟ್ಟು ಪಾಲಕ್
1½ ಕಪ್ ಅಕ್ಕಿ ಹಿಟ್ಟು
½ ಕಪ್ ರವೆ / ಸೂಜಿ
1 ಟೀಸ್ಪೂನ್ ಜೀರಿಗೆ
¾ ಟೀಸ್ಪೂನ್ ಉಪ್ಪು
4 ಕಪ್ ನೀರು
1 ಇಂಚಿನ ತುರಿದ ಶುಂಠಿ
2 ಮೆಣಸಿನಕಾಯಿಗಳು , ಸಣ್ಣಗೆ ಹೆಚ್ಚಿದವು
ಸ್ವಲ್ಪ ಕರಿಬೇವು ಎಲೆಗಳು , ಕತ್ತರಿಸಿದ್ದು
ಹಿಂಗ್
ಎಣ್ಣೆ
ಈರುಳ್ಳಿ, ಕತ್ತರಿಸಿದ್ದು

ಮಾಡುವ ವಿಧಾನ:

ಮೊದಲಿಗೆ 1 ಕಟ್ಟು ಪಾಲಾಕ್ ಅನ್ನು ನೀರಿನಲ್ಲಿ 2 ನಿಮಿಷಗಳ ಕಾಲ ಬ್ಲಾಂಚ್ ಮಾಡಿ, ಮಿಕ್ಸರ್ ಜಾರ್ ಗೆ ಹಾಕಿ ನಯವಾದ ಪ್ಯೂರಿ ರೀತಿ ರುಬ್ಬಿಕೊಳ್ಳಿ.

ಒಂದು ದೊಡ್ಡ ಬಟ್ಟಲಿನಲ್ಲಿ ಅಕ್ಕಿ ಹಿಟ್ಟು, ರವೆ, ಜೀರಿಗೆ ಮತ್ತು ಉಪ್ಪು, ತಯಾರಿಸಿದ ಪಾಲಾಕ್ ಪ್ಯೂರೀ ಮತ್ತು 4 ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಜೊತೆಗೆ ತುರಿದ ಶುಂಠಿ, ಮೆಣಸಿನಕಾಯಿ, ಕರಿಬೇವು ಎಲೆಗಳು ಮತ್ತು ಚಿಟಿಕೆ ಹಿಂಗ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ 20 ನಿಮಿಷಗಳ ಕಾಲ ಮುಚ್ಚಿಡಿ. ಹಿಟ್ಟು ಸ್ವಲ್ಪ ತೆಳ್ಳಗೆ ಇರಲಿ.

ಪ್ಯಾನ್ ಬಿಸಿಯಾದಾಗ, ಸಣ್ಣಗೆ ಕತ್ತರಿಸಿದ ಈರುಳ್ಳಿ ಹರಡಿ ಅದರ ಮೇಲೆ ಬ್ಯಾಟರ್ ಅನ್ನು ಪ್ಯಾನ್ ಮೇಲೆ ಸುರಿದು ದೋಸೆ ಗರಿ ಗರಿಯಾಗುವವರೆಗೆ ಬೇಯಿಸಿದರೆ ಪಾಲಕ್ ದೋಸೆ ರೆಡಿ.

ಇದನ್ನೂ ಓದಿ