ಹೋಟೆಲ್ ಶೈಲಿಯ ಕರಿ ಮನೆಲ್ಲೇ ಟ್ರೈ ಮಾಡಬೇಕು ಅನ್ನೋ ಆಸೆ ಇದ್ದರೆ, ಆಲೂ ಚಂಗೇಝಿ ಒಂದು ಪರ್ಫೆಕ್ಟ್ ಆಯ್ಕೆ. ಉತ್ತರ ಭಾರತದ ಮೊಘಲಾಯಿ ಸ್ಪರ್ಶ ಹೊಂದಿರುವ ಈ ಕರಿ ಮೃದುವಾದ ಆಲೂಗಡ್ಡೆ, ಸುವಾಸನೆಯ ಮಸಾಲೆ ಮತ್ತು ಕ್ರೀಮಿ ಗ್ರೇವಿ ಸೇರಿ ಬಾಯಲ್ಲಿ ಕರಗುವ ರುಚಿ ನೀಡುತ್ತದೆ.
ಬೇಕಾಗುವ ಸಾಮಗ್ರಿಗಳು
ಆಲೂಗಡ್ಡೆ – 3
ಈರುಳ್ಳಿ – 2
ಟೊಮೇಟೊ (ಪ್ಯೂರಿ) – 2
ಕಾಜು – 10
ಹಸಿಮೆಣಸು – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಕೆಂಪು ಮೆಣಸಿನ ಪುಡಿ – 1 ಚಮಚ
ಧನಿಯಾ ಪುಡಿ – 1 ಚಮಚ
ಗರಂ ಮಸಾಲಾ – ½ ಚಮಚ
ಕ್ರೀಮ್ – 2 ಚಮಚ
ಬೆಣ್ಣೆ / ಎಣ್ಣೆ – ಅಗತ್ಯಕ್ಕೆ ತಕ್ಕಂತೆ
ಉಪ್ಪು – ರುಚಿಗೆ ತಕ್ಕಂತೆ
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಮಾಡುವ ವಿಧಾನ
ಮೊದಲು ಬೇಯಿಸಿದ ಆಲೂಗಡ್ಡೆಗಳನ್ನು ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿ ಬದಿಯಲ್ಲಿ ಇಡಿ.
ಒಂದು ಪಾತ್ರೆಯಲ್ಲಿ ಎಣ್ಣೆ ಅಥವಾ ಬೆಣ್ಣೆ ಬಿಸಿ ಮಾಡಿ ಈರುಳ್ಳಿ ಹಾಕಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿಮೆಣಸು ಸೇರಿಸಿ ಹುರಿಯಿರಿ. ನಂತರ ಟೊಮೇಟೋ ಪ್ಯೂರಿ ಹಾಕಿ ಎಣ್ಣೆ ಬೇರ್ಪಡುವವರೆಗೆ ಬೇಯಿಸಿ. ಈಗ ಕಾಜು ಪೇಸ್ಟ್ ಸೇರಿಸಿ ಚೆನ್ನಾಗಿ ಕಲಸಿ, ಎಲ್ಲಾ ಮಸಾಲೆ ಪುಡಿಗಳು ಮತ್ತು ಉಪ್ಪು ಹಾಕಿ.
ಮಸಾಲೆ ಫ್ರೈ ಆದ ಬಳಿಕ ಆಲೂಗಡ್ಡೆ ತುಂಡುಗಳನ್ನು ಸೇರಿಸಿ ಸ್ವಲ್ಪ ನೀರು ಹಾಕಿ 5–7 ನಿಮಿಷ ಕುದಿಯಲು ಬಿಡಿ. ಕೊನೆಗೆ ಕ್ರೀಮ್ ಮತ್ತು ಗರಂ ಮಸಾಲಾ ಸೇರಿಸಿ ಕೊತ್ತಂಬರಿ ಸೊಪ್ಪು ಹಾಕಿ.

