Sunday, October 12, 2025

FOOD | ಈರುಳ್ಳಿ ಪರೋಟ ತಿಂದಿದ್ದೀರಾ? ಇಲ್ಲಾಂದ್ರೆ ಒಮ್ಮೆ ಟ್ರೈ ಮಾಡಿ

ಭಾರತೀಯ ಆಹಾರದಲ್ಲಿ ಪರೋಟ ಅಂದ್ರೆ ಎಲ್ಲರಿಗೂ ಪ್ರಿಯವಾದ ಫ್ಲಾಟ್‌ಬ್ರೆಡ್. ವಿಶೇಷವಾಗಿ ಪಂಜಾಬ್‌ನಲ್ಲಿ ಹೆಚ್ಚು ಪ್ರಸಿದ್ಧವಾದ ಪರೋಟ ಈಗ ದೇಶಾದ್ಯಂತ ಹಾಗೂ ವಿದೇಶಗಳಲ್ಲಿಯೂ ಜನಪ್ರಿಯವಾಗಿದೆ. ಸಾಮಾನ್ಯವಾಗಿ ಗೋಧಿ ಹಿಟ್ಟಿನಿಂದ ತಯಾರಿಸುವ ಪರೋಟಕ್ಕೆ ವಿವಿಧ ತರಕಾರಿಗಳನ್ನು ಸೇರಿಸಿ ಇನ್ನೂ ರುಚಿಕರವನ್ನಾಗಿ ಮಾಡಬಹುದು. ಆಲೂ ಪರೋಟ, ಮಸಾಲಾ ಪರೋಟ ಮಾಡಿದಂತೆಯೇ, ಇಂದು ನಾವು ಸುಲಭವಾಗಿ ಮಾಡಬಹುದಾದ ಈರುಳ್ಳಿ ಪರೋಟ ರೆಸಿಪಿ ನೋಡೋಣ.

ಬೇಕಾಗುವ ಪದಾರ್ಥಗಳು:

ಗೋಧಿ ಹಿಟ್ಟು – 2 ಕಪ್
ಉಪ್ಪು – ಅರ್ಧ ಟೀಸ್ಪೂನ್
ಎಣ್ಣೆ – 2 ಟೀಸ್ಪೂನ್
ನೀರು – ಅಗತ್ಯವಿರುವಷ್ಟು

ಸ್ಟಫಿಂಗ್‌ಗೆ:

ಸಣ್ಣಗೆ ಹೆಚ್ಚಿದ ಈರುಳ್ಳಿ – 1 ಕಪ್
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2
ಗರಂ ಮಸಾಲೆ ಪುಡಿ – ಚಿಟಿಕೆ
ಕೆಂಪು ಮೆಣಸಿನ ಪುಡಿ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಪರೋಟ ಬೇಯಿಸಲು ಬೇಕಾದಷ್ಟು

ಮಾಡುವ ವಿಧಾನ:

ಮೊದಲಿಗೆ ಗೋಧಿ ಹಿಟ್ಟು, ಉಪ್ಪು, ಎಣ್ಣೆ ಮತ್ತು ಅಗತ್ಯವಿರುವಷ್ಟು ನೀರು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿ. ಇದನ್ನು ಮುಚ್ಚಿ 20–30 ನಿಮಿಷ ಪಕ್ಕಕ್ಕಿಟ್ಟು ವಿಶ್ರಾಂತಿ ನೀಡಿ.

ಈಗ ಸ್ಟಫಿಂಗ್‌ಗಾಗಿ ಈರುಳ್ಳಿ, ಹಸಿರು ಮೆಣಸಿನಕಾಯಿ, ಗರಂ ಮಸಾಲೆ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಹಿಟ್ಟಿನಿಂದ ಮಧ್ಯಮ ಗಾತ್ರದ ಉಂಡೆ ಮಾಡಿ, ಲಟ್ಟಣಿಗೆಯಿಂದ ಸ್ವಲ್ಪ ದೊಡ್ಡದಾಗಿ ಲಟ್ಟಿಸಿ. ಅದರ ಮಧ್ಯದಲ್ಲಿ ಈರುಳ್ಳಿ ಮಿಶ್ರಣವನ್ನು ಹಾಕಿ, ಅಂಚುಗಳನ್ನು ಜೋಡಿಸಿ ಪುನಃ ಉಂಡೆ ಮಾಡಿ. ಇದನ್ನು ಮತ್ತೆ ಲಟ್ಟಿಸಿ.

ಬಿಸಿ ಮಾಡಿದ ತವಾದಲ್ಲಿ ಇಟ್ಟು, ಎರಡೂ ಬದಿ ಎಣ್ಣೆ ಹಚ್ಚಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಬೇಯಿಸಿ.

error: Content is protected !!