Friday, October 24, 2025

FOOD | ಆರೋಗ್ಯಕರ ರಾಗಿ ಚಕ್ಕುಲಿ ತಿಂದಿದ್ದೀರಾ? ಒಮ್ಮೆ ಟ್ರೈ ಮಾಡಿ

ಸಂಜೆ ತಿಂಡಿಗೆ ಕರುಮ್ ಕುರುಮ್ ಅಂತ ತಿನ್ನೋಕೆ ಏನಾದ್ರು ಬೇಕು ಅನ್ನೋರು ಈ ರಾಗಿ ಹಿಟ್ಟಿನ ಚಕ್ಕುಲಿ ಟ್ರೈ ಮಾಡಿ. ರಾಗಿ ಹಿಟ್ಟಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಹಾಗೂ ಫೈಬರ್‌ ಅಂಶಗಳು ತುಂಬಿದ್ದು, ಇದು ರುಚಿಗೂ ಆರೋಗ್ಯಕ್ಕೂ ಒಟ್ಟಾಗಿ ಒಳ್ಳೆಯದು.

ಬೇಕಾಗುವ ಪದಾರ್ಥಗಳು:

ರಾಗಿ ಹಿಟ್ಟು – 2 ಕಪ್
ಕಡಲೆ ಹಿಟ್ಟು – 2 ಕಪ್
ಅಕ್ಕಿ ಹಿಟ್ಟು – 2 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಖಾರದ ಪುಡಿ – 2 ಟೀಸ್ಪೂನ್
ಅಜವಾನ – 2 ಟೀಸ್ಪೂನ್
ಬಿಳಿ ಎಳ್ಳು – 4 ಟೀಸ್ಪೂನ್
ಬೆಣ್ಣೆ – 6 ಟೀಸ್ಪೂನ್
ಇಂಗು – 1 ಟೀಸ್ಪೂನ್
ಎಣ್ಣೆ – ಕರಿಯಲು ಬೇಕಾದಷ್ಟು

ತಯಾರಿಸುವ ವಿಧಾನ:

ಮೊದಲು ರಾಗಿ, ಕಡಲೆ ಮತ್ತು ಅಕ್ಕಿ ಹಿಟ್ಟನ್ನು ಶೋಧಿಸಿ ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ. ಅದಕ್ಕೆ ಉಪ್ಪು, ಖಾರದ ಪುಡಿ, ಅಜವಾನ, ಎಳ್ಳು ಮತ್ತು ಕರಗಿಸಿದ ಬೆಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಇಂಗು ಸೇರಿಸಿ, ನಂತರ ಬಿಸಿನೀರನ್ನು ಸ್ವಲ್ಪಸ್ವಲ್ಪವಾಗಿ ಸೇರಿಸಿ, ಚಪಾತಿ ಹಿಟ್ಟಿನಂತೆಯೇ ಮೃದುವಾಗಿ ಬೆರೆಸಿಕೊಳ್ಳಿ. ಹಿಟ್ಟನ್ನು ಮುಚ್ಚಿ 10 ನಿಮಿಷ ಪಕ್ಕಕ್ಕೆ ಇಡಿ.

ಚಕ್ಕುಲಿ ಅಚ್ಚಿನಲ್ಲಿ ಹಿಟ್ಟನ್ನು ತುಂಬಿ, ಬಿಸಿ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಚಕ್ಕುಲಿಗಳನ್ನು ಕರಿಯಿರಿ. ಎರಡೂ ಬದಿಗಳು ಬಂಗಾರದ ಬಣ್ಣಕ್ಕೆ ಬರುವವರೆಗೆ ಬೇಯಿಸಿ, ಬಳಿಕ ತಣ್ಣಗಾದ ಮೇಲೆ ಪಾತ್ರೆಯಲ್ಲಿ ಸಂಗ್ರಹಿಸಿ.

error: Content is protected !!