Monday, October 27, 2025

FOOD | ಕ್ರಿಸ್ಪಿ ಫ್ರೈಡ್ ಚಿಕನ್ ಮೊಮೊಸ್‌ ಸವಿದಿದ್ದೀರಾ? ಮನೆಯಲ್ಲೇ ಮಾಡಿ ಈ ಸಿಂಪಲ್ ರೆಸಿಪಿ

ಮೊಮೊಸ್‌ ಟೆಬೆಟ್ ನಿಂದ ಬಂದಿರುವ ಒಂದು ರುಚಿಕರ ತಿನಿಸು. ಈಗ ಅದು ಭಾರತದ ಎಲ್ಲೆಡೆ ಜನಪ್ರಿಯವಾಗಿದೆ. ಚಿಕನ್ ಮೊಮೊಸ್‌ಗೆ ಫ್ರೈ ಮಾಡಿದರೆ ಅದು ಇನ್ನೂ ರುಚಿಕರವಾಗುತ್ತದೆ. ಹೊರಗಡೆ ಕ್ರಿಸ್ಪಿ, ಒಳಗೆ ಜ್ಯೂಸಿ ಚಿಕನ್‌ ಫಿಲ್ಲಿಂಗ್‌. ಒಂದು ತಿಂದ್ರೆ ಮತ್ತೆ ಮತ್ತೆ ತಿನ್ಬೇಕು ಅನಿಸುತ್ತೆ! ಬನ್ನಿ, ಮನೆಯಲ್ಲೇ ಸುಲಭವಾಗಿ ಫ್ರೈಡ್ ಚಿಕನ್ ಮೊಮೊಸ್‌ ಮಾಡೋ ವಿಧಾನ ನೋಡೋಣ.

ಬೇಕಾಗುವ ಪದಾರ್ಥಗಳು:

ಮೈದಾ – 1 ಕಪ್
ಉಪ್ಪು – ಸ್ವಲ್ಪ
ನೀರು – ಅಗತ್ಯಕ್ಕೆ ತಕ್ಕಂತೆ
ಚಿಕನ್ ಕೀಮಾ – 1 ಕಪ್
ಈರುಳ್ಳಿ – 1
ಹಸಿಮೆಣಸಿನಕಾಯಿ – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಸೋಯಾ ಸಾಸ್ – 1 ಟೀಸ್ಪೂನ್
ಮೆಣಸಿನ ಪುಡಿ – ½ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ:

ಮೊದಲಿಗೆ ಮೈದಾ, ಉಪ್ಪು ಮತ್ತು ನೀರು ಸೇರಿಸಿ ಸಾಫ್ಟ್ ಹಿಟ್ಟು ಮಾಡಿ 15 ನಿಮಿಷ ಮುಚ್ಚಿ ಬಿಡಿ.

ಈಗ ಒಂದು ಬೌಲ್‌ನಲ್ಲಿ ಚಿಕನ್ ಕೀಮಾ, ಈರುಳ್ಳಿ, ಹಸಿಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌, ಸೋಯಾ ಸಾಸ್‌, ಮೆಣಸು ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.

ಹಿಟ್ಟಿನ ಸಣ್ಣ ಉಂಡೆ ಮಾಡಿ, ಚಪಾತಿಯಂತೆ ತೆಳುವಾಗಿ ಲಟ್ಟಿಸಿ, ಮಧ್ಯದಲ್ಲಿ ಚಿಕನ್ ಕೀಮಾ ಮಿಶ್ರಣ ಇಟ್ಟು ಮೊಮೊಸ್‌ ಶೇಪ್‌ನಲ್ಲಿ ಮುಚ್ಚಿ. ಮೊದಲು ಮೊಮೊಸ್‌ಗಳನ್ನು ಸ್ಟೀಮ್‌ ಮಾಡಿ 8–10 ನಿಮಿಷ ಬೇಯಿಸಿ.

ಈಗ ಒಂದು ಕಾದ ಎಣ್ಣೆಯಲ್ಲಿ ಬೇಯಿಸಿದ ಮೊಮೊಸ್‌ಗಳನ್ನು ಗೋಲ್ಡನ್ ಬ್ರೌನ್ ಆಗುವವರೆಗೆ ಕರಿಯಿರಿ.

error: Content is protected !!