Friday, January 9, 2026

FOOD | ಆರೋಗ್ಯಕ್ಕೆ ಹಿತವಾದ ಹುರುಳಿಕಾಳಿನ ರಸಂ! ಬಿಸಿ ಅನ್ನದ ಜೊತೆ ಸೂಪರ್ ಆಗಿರುತ್ತೆ

ಚಳಿಗಾಲವಾಗಲಿ, ಜ್ವರ–ಶೀತವಾಗಲಿ ನಮ್ಮ ದೇಹವನ್ನು ಬೆಚ್ಚಗಿಡೋಕೆ ಈ ಹುರುಳಿಕಾಳಿನ ರಸಂ ಇದ್ರೆ ಸಾಕು. ರುಚಿಯ ಜೊತೆ ಆರೋಗ್ಯದ ಖಜಾನೆಯೇ ಸರಿ ಈ ರಸಂ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿರುವ ಹುರುಳಿಕಾಳಿನಿಂದ ತಯಾರಿಸಿದ ಈ ರಸಂ ಹಳೆಯ ಕಾಲದ ಮನೆಮದ್ದು ಎಂದೇ ಹೇಳಬಹುದು.

ಅವಶ್ಯಕ ಪದಾರ್ಥಗಳು

ಹುರುಳಿಕಾಳು – ½ ಕಪ್
ನೀರು – 3 ಕಪ್
ಹುಣಸೆ ಹಣ್ಣು – ಸಣ್ಣ ನಿಂಬೆ ಗಾತ್ರ
ರಸಂ ಪುಡಿ – 1 ಟೀಸ್ಪೂನ್
ಬೆಳ್ಳುಳ್ಳಿ – 5–6 ಕಳಿ
ಹಸಿಮೆಣಸು – 1 (ಐಚ್ಛಿಕ)
ಅರಿಶಿಣ – ಚಿಟಿಕೆ
ಉಪ್ಪು – ರುಚಿಗೆ ತಕ್ಕಂತೆ
ಎಣ್ಣೆ – 1 ಟೀಸ್ಪೂನ್
ಸಾಸಿವೆ – ½ ಟೀಸ್ಪೂನ್
ಜೀರಿಗೆ – ½ ಟೀಸ್ಪೂನ್
ಕರಿಬೇವು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ

ಮೊದಲು ಹುರುಳಿಕಾಳನ್ನು ಚೆನ್ನಾಗಿ ತೊಳೆದು 6–8 ಗಂಟೆಗಳ ಕಾಲ ನೆನೆಸಿಟ್ಟು, ನಂತರ 2–3 ಸೀಟಿ ಕುಕ್ಕರ್ ನಲ್ಲಿ ಬೇಯಿಸಿ. ಹುರುಳಿಕಾಳನ್ನು ತೆಗೆದಿಡಿ. ಅದೇ ನೀರಿಗೆ ಹುಣಸೆ ರಸ, ಅರಿಶಿಣ, ಉಪ್ಪು ಮತ್ತು ರಸಂ ಪುಡಿ ಸೇರಿಸಿ ಮಧ್ಯಮ ಉರಿಯಲ್ಲಿ ಕುದಿಯಲು ಬಿಡಿ. ಬೇರೆ ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಹಸಿಮೆಣಸು ಹಾಗೂ ಕರಿಬೇವು ಹಾಕಿ ಒಗ್ಗರಣೆ ಮಾಡಿ ರಸಂಗೆ ಸೇರಿಸಿ. ಕೊತ್ತಂಬರಿ ಸೊಪ್ಪು ಹಾಕಿ ಒಂದು ಕುದಿ ಬಂದ ಮೇಲೆ ಗ್ಯಾಸ್ ಆಫ್ ಮಾಡಿ.

error: Content is protected !!