Saturday, November 15, 2025

FOOD | ಆರೋಗ್ಯಕರ ಕ್ಯಾರೆಟ್ ಪಲ್ಯ: ಅನ್ನ-ಸಾರು ಜೊತೆ ಬೆಸ್ಟ್

ದಿನನಿತ್ಯದ ಊಟಕ್ಕೆ ಬೇಗನೆ ತಯಾರಾಗುವ ಮತ್ತು ಪೋಷಕಾಂಶಗಳಿಂದ ಕೂಡಿರುವ ಪಲ್ಯ ಬೇಕೆಂದರೆ ಕ್ಯಾರೆಟ್ ಪಲ್ಯ ಯಾವಾಗಲೂ ಉತ್ತಮ ಆಯ್ಕೆ. ಈ ಪಲ್ಯ ಅನ್ನ, ರೊಟ್ಟಿ, ಚಪಾತಿ ಎಲ್ಲಕ್ಕೂ ಸೂಕ್ತ. ಈಗ ಮನೆಯಲ್ಲೇ ತುಂಬಾ ಸಿಂಪಲ್ ಆಗಿ ಮಾಡಬಹುದಾದ ಕ್ಯಾರೆಟ್ ಪಲ್ಯ ರೆಸಿಪಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

ಕ್ಯಾರೆಟ್ – 3–4
ಈರುಳ್ಳಿ – 1
ಹಸಿಮೆಣಸು – 2
ಕರಿಬೇವು – 1 ದಂಟು
ಸಾಸಿವೆ – ½ ಟೀ ಸ್ಪೂನ್
ಉದ್ದಿನಬೇಳೆ – 1 ಟೀ ಸ್ಪೂನ್
ಅರಿಶಿನ – ¼ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಸಕ್ಕರೆ – ಒಂದು ಚಿಟಿಕೆ
ತಾಜಾ ತೆಂಗಿನ ತುರಿ – 2 ಟೇಬಲ್ ಸ್ಪೂನ್
ಎಣ್ಣೆ – 1 ಟೇಬಲ್ ಸ್ಪೂನ್

ತಯಾರಿಸುವ ವಿಧಾನ

ಒಂದು ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಉದ್ದಿನಬೇಳೆ, ಕರಿಬೇವು ಮತ್ತು ಹಸಿಮೆಣಸನ್ನು ಸೇರಿಸಿ ಹುರಿಯಿರಿ. ಈಗ ಈರುಳ್ಳಿ ಹಾಕಿ ಸ್ವಲ್ಪ ಹುರಿಯಿರಿ.

ನಂತರ ತುರಿದ ಕ್ಯಾರೆಟ್, ಅರಿಶಿನ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿ. ಕಡಿಮೆ ಉರಿಯಲ್ಲಿ 5–6 ನಿಮಿಷ ಮುಚ್ಚಿ ಬೇಯಿಸಿ. (ಸ್ವಲ್ಪ ಕ್ರಂಚಿ ಇದ್ದರೆ ರುಚಿ!) ಬೇಕಿದ್ದರೆ ಸಕ್ಕರೆ ಒಂದು ಚಿಟಿಕೆ ಹಾಕಿ. ರುಚಿ ಹೆಚ್ಚುತ್ತದೆ. ಕೊನೆಯಲ್ಲಿ ತೆಂಗಿನ ತುರಿ ಸೇರಿಸಿ ಒಂದು ಸುತ್ತು ಕಲಸಿ ಗ್ಯಾಸ್ ಆಫ್ ಮಾಡಿ.

error: Content is protected !!