January16, 2026
Friday, January 16, 2026
spot_img

FOOD | ಆರೋಗ್ಯಕರ ಬಿಸಿ ಬಿಸಿ ವೆಜಿಟೇಬಲ್ ಸೂಪ್! ನೀವೂ ಒಮ್ಮೆ ಟ್ರೈ ಮಾಡಿ

ಸಂಜೆಯ ವೇಳೆ ಬಿಸಿ ಬಿಸಿಯಾಗಿ ಏನಾದ್ರು ಕುಡಿಯಬೇಕು ಅನ್ನಿಸುವುದು ಸಹಜ. ಆದ್ರೆ ಹೋಟೆಲ್‌ಗೆ ಹೋಗೋಕೆ ಉದಾಸೀನ ಅಂದ್ರೆ, ಮನೆಯಲ್ಲೇ ತಾಜಾ ತರಕಾರಿಗಳಿಂದ ಮಾಡಬಹುದಾದ ಈ ವೆಜಿಟೇಬಲ್ ಸೂಪ್ ಟ್ರೈ ಮಾಡಿ. ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್.

ಬೇಕಾಗುವ ಸಾಮಾಗ್ರಿಗಳು:

ಬಟಾಣಿ – ಒಂದು ಹಿಡಿ
ಎಲೆಕೋಸು – ಸಣ್ಣಗೆ ಹೆಚ್ಚಿದ್ದು ಸ್ವಲ್ಪ
ಕ್ಯಾರೆಟ್ – ಸಣ್ಣಗೆ ಹೆಚ್ಚಿದ್ದು ಸ್ವಲ್ಪ
ಸ್ವೀಟ್ ಕಾರ್ನ್ – ಸ್ವಲ್ಪ
ಬೆಳ್ಳುಳ್ಳಿ – 3 ರಿಂದ 4 ಎಸಳು
ಆಲೂಗಡ್ಡೆ – ಬೇಯಿಸಿದ್ದು 1
ಪೆಪ್ಪರ್ ಪೌಡರ್ – 1 ಸ್ಪೂನ್
ಬೀಟ್‌ರೂಟ್ – ಸಣ್ಣಗೆ ಹೆಚ್ಚಿದ್ದು ಸ್ವಲ್ಪ
ಕಾರ್ನ್‌ಫ್ಲೋರ್ – 1 ಸ್ಪೂನ್
ಕೊತ್ತಂಬರಿ ಸೊಪ್ಪು – ಸಣ್ಣಗೆ ಹೆಚ್ಚಿದ್ದು ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಒಂದು ಅಗಲವಾದ ಪಾತ್ರೆಗೆ ಸುಮಾರು ಮೂಕಾಲು ಲೀಟರ್ ನೀರು ಹಾಕಿ, ಎಲ್ಲ ತರಕಾರಿಗಳನ್ನು ಸೇರಿಸಿ ಬೇಯಲು ಬಿಡಿ.

ಈಗ ಮಿಕ್ಸಿ ಜಾರಿಗೆ ಬೇಯಿಸಿದ ಆಲೂಗಡ್ಡೆ ಮತ್ತು ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿ. ಒಂದು ಸಣ್ಣ ಬಟ್ಟಲಿಗೆ ಕಾರ್ನ್‌ಫ್ಲೋರ್ ಮತ್ತು ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಈಗ ಬೇಯುತ್ತಿರುವ ತರಕಾರಿಗಳಲ್ಲಿ ಆಲೂಗಡ್ಡೆ ಪೇಸ್ಟ್ ಮತ್ತು ಕಾರ್ನ್‌ಫ್ಲೋರ್ ಮಿಶ್ರಣ ಸೇರಿಸಿ ಕುದಿಯಲು ಬಿಡಿ. ಸಣ್ಣ ಕುದಿ ಬಂದ ನಂತರ ಉಪ್ಪು ಮತ್ತು ಪೆಪ್ಪರ್ ಪೌಡರ್ ಸೇರಿಸಿ ಚೆನ್ನಾಗಿ ಕಲಸಿ. 2-3 ನಿಮಿಷ ಕುದಿದ ಬಳಿಕ ಕೆಳಗಿಳಿಸಿ, ಮೇಲೆ ಕೊತ್ತಂಬರಿ ಉದುರಿಸಿ ಸರ್ವ್ ಮಾಡಿ.

Must Read

error: Content is protected !!