March 23, 2026
Monday, March 23, 2026
spot_img

FOOD | ಹೆಸ್ರೇ ಹೇಳ್ತಿದೆ ಹೆಸರುಬೇಳೆ ಸಾರು ಅಂತ..! ತುಂಬಾನೇ ರುಚಿಯಾಗಿರುತ್ತೆ, ಟ್ರೈ ಮಾಡಿ

ಸಿಂಪಲ್ ಆಗಿ ರೆಡಿಯಾಗೋ ಸಾರುಗಳಲ್ಲಿ ಹೆಸರುಬೇಳೆ ಸಾರು ಕೂಡ ಒಂದು. ಅನ್ನಕ್ಕೆ ತುಂಬಾ ಚೆನ್ನಾಗಿ ಹೊಂದಿಕೊಳ್ಳುವ ಈ ಸಾರು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.

ಬೇಕಾಗುವ ಪದಾರ್ಥಗಳು:

ಹೆಸರುಬೇಳೆ – 1 ಕಪ್
ಈರುಳ್ಳಿ – 1
ಟೊಮ್ಯಾಟೋ – 1
ಹಸಿಮೆಣಸು – 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಅರಿಶಿಣ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಟೇಬಲ್ ಸ್ಪೂನ್
ಸಾಸಿವೆ, ಜೀರಿಗೆ – ತಾಳಿಗೆ
ಕರಿಬೇವು, ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ:

ಮೊದಲು ಹೆಸರುಬೆಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್‌ನಲ್ಲಿ ನೀರು, ಅರಿಶಿಣ ಹಾಕಿ 2-3 ವಿಶಿಲ್ ಬರುವವರೆಗೆ ಬೇಯಿಸಿ. ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಆದ ಮೇಲೆ ಸಾಸಿವೆ, ಜೀರಿಗೆ, ಕರಿಬೇವು ಒಗ್ಗರಣೆ ಹಾಕಿ.

ಈಗ ಈರುಳ್ಳಿ, ಹಸಿಮೆಣಸು ಹಾಕಿ ಬಾಡಿಸಿ, ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಟೊಮ್ಯಾಟೋ ಹಾಕಿ ಚೆನ್ನಾಗಿ ಮೃದುವಾಗುವವರೆಗೆ ಬೇಯಿಸಿ. ಇದಕ್ಕೆ ಬೇಯಿಸಿದ ಹೆಸರುಬೆಳೆ ಸೇರಿಸಿ, ಉಪ್ಪು ಹಾಕಿ ಚೆನ್ನಾಗಿ ಕುದಿಯಲು ಬಿಡಿ.

ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿದರೆ ರುಚಿಯಾದ ಹೆಸರುಬೇಳೆ ಸಾರು ಸಿದ್ಧ. ಬಿಸಿ ಅನ್ನ ಜೊತೆ ಸರ್ವ್ ಮಾಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !