ಕೋಡುಬಳೆ ಎಂದರೆ ಕರ್ನಾಟಕದ ಸಾಂಪ್ರದಾಯಿಕ ತಿಂಡಿ. ಸಾಮಾನ್ಯವಾಗಿ ಚಹಾ-ಕಾಫಿಯ ಜೊತೆ ಕೋಡುಬಳೆ ತಿನ್ನುವುದಕ್ಕೆ ಜನ ಹೆಚ್ಚು ಇಷ್ಟಪಡುತ್ತಾರೆ. ಆದರೆ ಈ ಬಾರಿ ಸ್ವಲ್ಪ ಹೊಸ ಸ್ಟೈಲ್‌ನಲ್ಲಿ, ಮೊಸರು ಕೋಡುಬಳೆ ತಯಾರಿಸಿ ನೋಡಿ. ಮೊಸರಿನಿಂದ ಮಾಡಿದ ಕೋಡುಬಳೆಗಳು ಹೊರಗೆ ಕರುಕು, ಒಳಗೆ ಮೃದುವಾಗಿರುತ್ತವೆ.
ಬೇಕಾಗುವ ಪದಾರ್ಥಗಳು:
ಅಕ್ಕಿ ಹಿಟ್ಟು – 2 ಕಪ್
ಉದ್ದಿನ ಬೇಳೆ ಹಿಟ್ಟು – 2 ಟೇಬಲ್ ಚಮಚ
ಮೊಸರು – ½ ಕಪ್
ಬೆಣ್ಣೆ – 2 ಟೇಬಲ್ ಚಮಚ
ಹಸಿಮೆಣಸಿನ ಕಾಯಿ ಪೇಸ್ಟ್ – 2
ಜೀರಿಗೆ – 1 ಟೀ ಚಮಚ
ಎಳ್ಳು – 1 ಟೇಬಲ್ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಉದ್ದಿನ ಬೇಳೆ ಹಿಟ್ಟು, ಜೀರಿಗೆ, ಎಳ್ಳು, ಹಸಿಮೆಣಸಿನ ಪೇಸ್ಟ್, ಉಪ್ಪು, ಮೊಸರು ಮತ್ತು ಬೆಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಅಗತ್ಯವಿದ್ದರೆ ಸ್ವಲ್ಪ ನೀರು ಹಾಕಿ ಗಟ್ಟಿಯಾದ ಮುದ್ದೆ ಮಾಡಿಕೊಳ್ಳಿ.
ಮುದ್ದೆಯನ್ನು ಚಿಕ್ಕಚಿಕ್ಕ ಉಂಡೆಗಳಾಗಿ ಮಾಡಿ, ಕೈಯಿಂದ ಚಿಕ್ಕ ಚಕ್ರದಂತೆ ಕೋಡುಬಳೆ ಆಕಾರದಲ್ಲಿ ತಯಾರಿಸಿ.
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ತಯಾರಿಸಿದ ಕೋಡುಬಳೆಗಳನ್ನು ಮಧ್ಯಮ ಉರಿಯಲ್ಲಿ ಬಂಗಾರದ ಬಣ್ಣ ಬರುವವರೆಗೆ ಕರಿದರೆ ಮೊಸರು ಕೋಡುಬಳೆ ಸಿದ್ಧ!