March 20, 2026
Friday, March 20, 2026
spot_img

FOOD | ಡಯೆಟ್ ಮಾಡೋರಿಗೆ ಈ ಕ್ವಿನೋವಾ ಚಿತ್ರಾನ್ನ ಹೇಳಿ ಮಾಡಿಸಿದ್ದು, ನೀವೂ ಟ್ರೈ ಮಾಡಿ

ತೂಕ ಇಳಿಸೋಕೆ ಡಯೆಟ್ ಮಾಡ್ತಿರೋರಿಗೆ ಟೇಸ್ಟಿ ಆಗಿ, ಆರೋಗ್ಯಕರವಾಗಿಯೂ ತಿನ್ನೋಕೆ ಈ ಕ್ವಿನೋವಾ ಚಿತ್ರಾನ್ನ ಬೆಸ್ಟ್. ಅಕ್ಕಿ ಬದಲು ಕ್ವಿನೋವಾ ಬಳಸಿದ್ರೆ ಪ್ರೋಟೀನ್ ಹೆಚ್ಚು, ಕ್ಯಾಲೊರಿಗಳು ಕಡಿಮೆ ಹೊಟ್ಟೆ ತುಂಬಿದ ಅನುಭವವೂ ಹೆಚ್ಚು ಸಮಯ ಇರುತ್ತೆ!

ಬೇಕಾಗುವ ಸಾಮಗ್ರಿಗಳು:

ಕ್ವಿನೋವಾ – 1 ಕಪ್
ನೀರು – 2 ಕಪ್
ಎಣ್ಣೆ – 1 ಟೀ ಸ್ಪೂನ್
ಸಾಸಿವೆ – ½ ಟೀ ಸ್ಪೂನ್
ಜೀರಿಗೆ – ½ ಟೀ ಸ್ಪೂನ್
ಕಡಲೆಬೇಳೆ – 1 ಟೇಬಲ್ ಸ್ಪೂನ್
ಉದ್ದಿನ ಬೇಳೆ – 1 ಟೇಬಲ್ ಸ್ಪೂನ್
ಕರಿಬೇವು – ಕೆಲವು ಎಲೆಗಳು
ಹಸಿ ಮೆಣಸಿನಕಾಯಿ – 2 (ಚೂರು)
ಈರುಳ್ಳಿ – 1 (ಸಣ್ಣದಾಗಿ ಕತ್ತರಿಸಿ)
ಅರಿಶಿನ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ನಿಂಬೆರಸ – 1 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ಮಾಡುವ ವಿಧಾನ:

ಮೊದಲು ಕ್ವಿನೋವಾವನ್ನು ಚೆನ್ನಾಗಿ ತೊಳೆದು 2 ಕಪ್ ನೀರಿನಲ್ಲಿ ಬೇಯಿಸಿಕೊಳ್ಳಿ. ನೀರು ಸಂಪೂರ್ಣ ಹೀರಿಕೊಂಡು ಮೃದುವಾಗಬೇಕು.

ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ ಹಾಕಿ ಒಗ್ಗರಣೆ ಮಾಡಿ. ಕಡಲೆಬೇಳೆ, ಉದ್ದಿನ ಬೇಳೆ ಹಾಕಿ ಸ್ವಲ್ಪ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ಈಗ ಕರಿಬೇವು, ಹಸಿ ಮೆಣಸಿನಕಾಯಿ, ಈರುಳ್ಳಿ ಹಾಕಿ ಫ್ರೈ ಮಾಡಿ. ಅರಿಶಿನ, ಉಪ್ಪು ಸೇರಿಸಿ ಬೇಯಿಸಿದ ಕ್ವಿನೋವಾ ಹಾಕಿ ಚೆನ್ನಾಗಿ ಕಲಸಿ. ಕೊನೆಯಲ್ಲಿ ನಿಂಬೆರಸ, ಕೊತ್ತಂಬರಿ ಹಾಕಿ ಮಿಕ್ಸ್ ಮಾಡಿದ್ರೆ ರೆಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !