ಮನೆಯಲ್ಲಿ ಬಾಳೆಹಣ್ಣು ಹೆಚ್ಚು ಮೃದುವಾಗಿ ಉಳಿದಿದೆಯಾ? ಎಸೆದುಬಿಡೋದಕ್ಕಿಂತ ಈ ಸರಳ ಮತ್ತು ರುಚಿಯಾದ ಬಾಳೆಹಣ್ಣು ಶೇಕ್ ಮಾಡಿ ಕುಡಿಯಿರಿ. ಬಿಸಿಲಿನ ದಿನಗಳಲ್ಲಿ ದೇಹಕ್ಕೆ ತಂಪು ನೀಡುವುದಲ್ಲದೆ, ಶಕ್ತಿ ಕೂಡ ತುಂಬುತ್ತದೆ.
ಬೇಕಾಗುವ ಪದಾರ್ಥಗಳು:
2 ಹಣ್ಣಾದ ಬಾಳೆಹಣ್ಣು
1 ಗ್ಲಾಸ್ ತಂಪಾದ ಹಾಲು
2 ಚಮಚ ಸಕ್ಕರೆ (ಅಗತ್ಯವಿದ್ದರೆ)
2–3 ಐಸ್ ಕ್ಯೂಬ್‌ಗಳು
ಸ್ವಲ್ಪ ಏಲಕ್ಕಿ ಪುಡಿ (ಐಚ್ಛಿಕ)
1 ಚಮಚ ಜೇನುತುಪ್ಪ (ಐಚ್ಛಿಕ)
ಮಾಡುವ ವಿಧಾನ:
ಬಾಳೆಹಣ್ಣಿನ ಸಿಪ್ಪೆ ತೆಗೆದು ತುಂಡುಗಳಾಗಿ ಕತ್ತರಿಸಿ ಮಿಕ್ಸಿ ಜಾರಿಗೆ ಹಾಕಿ ಹಾಲು, ಸಕ್ಕರೆ ಹಾಕಿ. ಐಸ್ ಕ್ಯೂಬ್‌ಗಳನ್ನು ಸೇರಿಸಿ ಚನ್ನಾಗಿ ರುಬ್ಬಿಕೊಳ್ಳಿ.
ಕೊನೆಯಲ್ಲಿ ಏಲಕ್ಕಿ ಪುಡಿ ಹಾಗು ಜೇನುತುಪ್ಪ ಸೇರಿಸಿ ಮತ್ತೆ ಒಂದು ಸಾರಿ ಮಿಕ್ಸ್ ಮಾಡಿ.
ಸರಳ ಪದಾರ್ಥಗಳಿಂದ 5 ನಿಮಿಷದಲ್ಲಿ ತಯಾರಾಗುವ ಈ ಶೇಕ್ ನಿಮ್ಮ ಬಿಸಿಲಿನ ದಿನವನ್ನು ತಂಪಾಗಿಸೋದು ಗ್ಯಾರಂಟಿ



