ಮಧ್ಯಾಹ್ನ ಊಟಕ್ಕೆ ಏನಾದರೂ ಸಿಂಪಲ್ ಆದರೆ ರುಚಿಕರವಾದ ಕರಿ ಬೇಕೆಂದರೆ ದಹಿ ಆಲೂ ಒಳ್ಳೆಯ ಆಯ್ಕೆ. ಮೊಸರು ಮತ್ತು ಆಲೂಗಡ್ಡೆ ಬಳಸಿ ಮಾಡುವ ಈ ಕರ್ರಿ ಅನ್ನ, ಚಪಾತಿ ಎರಡರ ಜೊತೆಯಲ್ಲೂ ಚೆನ್ನಾಗಿ ಹೊಂದುತ್ತದೆ. ತಯಾರಿಸಲು ಸುಲಭವಾಗಿರುವುದರಿಂದ ಫಟಾಫಟ್ ಮಾಡಬಹುದಾದ ಊಟದ ಸೈಡ್ ಡಿಶ್ ಆಗಿ ಇದನ್ನು ಟ್ರೈ ಮಾಡಬಹುದು.
ಬೇಕಾಗುವ ಪದಾರ್ಥಗಳು:
ಆಲೂಗಡ್ಡೆ – 250 ಗ್ರಾಂ
ಮೊಸರು – 1 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಚಾಟ್ ಮಸಾಲಾ – ¼ ಟೀಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೇಬಲ್‌ಸ್ಪೂನ್
ಎಣ್ಣೆ – ಅಗತ್ಯಕ್ಕೆ ತಕ್ಕಂತೆ
ಮಾಡುವ ವಿಧಾನ:
ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಜೀರಿಗೆ ಹಾಕಿ ಚಿಟಪಟೆ ಹುರಿಯಿರಿ. ನಂತರ ಆಲೂಗಡ್ಡೆ ತುಂಡುಗಳನ್ನು ಹಾಕಿ, ಉಪ್ಪು, ಚಾಟ್ ಮಸಾಲಾ ಮತ್ತು ಕೆಂಪು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಕಲಸಿ ಹುರಿಯಿರಿ.
ಈಗ ಮೊಸರು ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ, 2–3 ನಿಮಿಷ ಬೇಯಿಸಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಅಲಂಕರಿಸಿದರೆ ದಹಿ ಆಲೂ ಸವಿಯಲು ಸಿದ್ಧ.