ಮನೆಯಲ್ಲಿ ಸುವರ್ಣಗೆಡ್ಡೆ ಇದೆ ಪಲ್ಯ ಯಾರು ತಿನ್ನಲ್ಲ, ಸಾಂಬಾರ್ ಬೇಡ. ಹಾಗಿದ್ರೆ ಏನ್ ಸ್ಪೆಷಲ್ ಆಗಿ ಮಾಡೋದು ಅಂತ ಯೋಚ್ನೆ ಮಾಡ್ತಿದ್ರೆ ಸುವರ್ಣಗೆಡ್ಡೆಯ ರವಾ ಫ್ರೈ ಟ್ರೈ ಮಾಡಿ. ಅನ್ನ-ಸಾರು ಅಥವಾ ದಾಲ್ ಜೊತೆ ಸೂಪರ್ ಕಾಂಬಿನೇಷನ್.
ಬೇಕಾಗುವ ಪದಾರ್ಥಗಳು:
ಸುವರ್ಣಗೆಡ್ಡೆ – 2
ರವಾ (ಸೂಜಿ) – ½ ಕಪ್
ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್
ಅರಿಶಿನ – ¼ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಲಿಂಬೆರಸ – 1 ಟೀ ಸ್ಪೂನ್
ಓಮ – ಸ್ವಲ್ಪ
ಎಣ್ಣೆ – ಸ್ವಲ್ಪ
ಮಾಡುವ ವಿಧಾನ:
ಮೊದಲು ಸುವರ್ಣಗೆಡ್ಡೆ ಕಟ್ ಮಾಡಿ ಸ್ಲೈಸ್‌ಗಳನ್ನು ಮಾಡಿ ತೊಳೆಯಿರಿ ಮತ್ತು ಸ್ವಲ್ಪ ನೀರಿನಲ್ಲಿ ಬೇಯಿಸಿ (ಅರ್ಧ ಬೇಯಿಸಿದರೆ ಸಾಕು).
ಒಂದು ಬೌಲ್‌ನಲ್ಲಿ ಮೆಣಸಿನ ಪುಡಿ, ಅರಿಶಿನ, ಉಪ್ಪು, ಲಿಂಬೆರಸ ಮತ್ತು ಓಮ ಹಾಕಿ ಮಿಶ್ರಣ ಮಾಡಿ. ಈ ಮಸಾಲೆಯಲ್ಲಿ ಸುವರ್ಣಗೆಡ್ಡೆ ತುಂಡುಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಪ್ರತಿಯೊಂದು ತುಂಡನ್ನು ರವಾದಲ್ಲಿ ಕೋಟ್ ಮಾಡಿ.
ತವಾ ಬಿಸಿ ಮಾಡಿ ಸ್ವಲ್ಪ ಎಣ್ಣೆ ಹಾಕಿ, ಈ ತುಂಡುಗಳನ್ನು ತವಾದ ಮೇಲೆ ಫ್ರೈ ಮಾಡಿ.



