March 6, 2026
Friday, March 6, 2026
spot_img

FOOD | ಹಳ್ಳಿ ಸ್ಟೈಲ್ ಬದನೆಕಾಯಿ ಗೊಜ್ಜು ಒಮ್ಮೆ ಮಾಡಿ! ನಾಳೆನೂ ಮತ್ತೆ ಇದೇ ಮಾಡ್ತೀರ!

ಹಳ್ಳಿ ಅಡುಗೆ ಎಂದರೆ ಅದರಲ್ಲಿ ಇರುವ ಸುವಾಸನೆ, ಸರಳತೆ ಮತ್ತು ಅಮ್ಮನ ಕೈರುಚಿ ನೆನಪಾಗುತ್ತೆ. ಅದೇ ರೀತಿ ಹಳ್ಳಿ ಸ್ಟೈಲ್‌ನಲ್ಲಿ ಮಾಡುವ ಬದನೆಕಾಯಿ ಗೊಜ್ಜು ಅನ್ನಕ್ಕೆ ಬೆರೆಸಿದರೆ ಸಾಕು, ಇನ್ನೇನೂ ಬೇಕಾಗೋದಿಲ್ಲ ಅನ್ನಿಸುವಷ್ಟು ರುಚಿಯಾಗಿರುತ್ತದೆ. ಕಡಿಮೆ ಪದಾರ್ಥಗಳಲ್ಲಿ, ಹೆಚ್ಚು ಸ್ವಾದ ಕೊಡೋ ಈ ಗೊಜ್ಜು ಒಮ್ಮೆ ಮಾಡಿ.

ಬೇಕಾಗುವ ಪದಾರ್ಥಗಳು:

ಬದನೆಕಾಯಿ – 4
ಈರುಳ್ಳಿ – 1
ಬೆಳ್ಳುಳ್ಳಿ – 4 ಎಸಳು
ಹುಣಸೆಹಣ್ಣು ರಸ – ಸ್ವಲ್ಪ
ಕೆಂಪು ಮೆಣಸಿನ ಪುಡಿ – 1 ಚಮಚ
ಅರಿಶಿನ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಚಮಚ
ಸಾಸಿವೆ, ಕರಿಬೇವು – ಒಗ್ಗರಣೆಗೆ

ಮಾಡುವ ವಿಧಾನ:

ಮೊದಲು ಬದನೆಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಸ್ವಲ್ಪ ಎಣ್ಣೆಯಲ್ಲಿ ಚೆನ್ನಾಗಿ ಬೇಯಿಸಿ. ನಂತರ ಕಾದ ಎಣ್ಣೆಗೆ ಸಾಸಿವೆ, ಕರಿಬೇವು, ಬೆಳ್ಳುಳ್ಳಿ ಹಾಕಿ ಒಗ್ಗರಣೆ ಮಾಡಿ. ಅದಕ್ಕೆ ಈರುಳ್ಳಿ ಸೇರಿಸಿ ಸ್ವಲ್ಪ ಬಾಡಿಸಿ. ಈಗ ಬೇಯಿಸಿದ ಬದನೆಕಾಯಿ, ಮೆಣಸಿನ ಪುಡಿ, ಅರಿಶಿನ, ಉಪ್ಪು ಮತ್ತು ಹುಣಸೆ ರಸ ಸೇರಿಸಿ ಚೆನ್ನಾಗಿ ಕಲಸಿ ಕೆಲವು ನಿಮಿಷ ಹಾಗೆ ಬಿಡಿ. ಎಣ್ಣೆ ಮೇಲಕ್ಕೆ ತೇಲಲು ಶುರುವಾದರೆ ಬದನೆಕಾಯಿ ಗೊಜ್ಜು ರೆಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !