ನಾನ್ ವೆಜ್ ತಿನ್ನದವರಿಗೂ ಕಬಾಬ್‌ನ ಖುಷಿ ಸಿಗಬಹುದು. ಹೇಗೆ ಅಂತೀರಾ? ಆದರೆ ಹೌದು! ಮನೆಯಲ್ಲೇ ತಯಾರಿಸಬಹುದಾದ ಆಲೂ ಕಬಾಬ್ ಒಂದು ಅದ್ಭುತ ವೆಜ್ ಡಿಶ್. ಸಂಜೆ ಟೀ ಜೊತೆ ಅಥವಾ ಅತಿಥಿಗಳಿಗೆ ಸ್ಟಾರ್ಟರ್ ಆಗಿ ಇದಕ್ಕಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ.
ಬೇಕಾಗುವ ಪದಾರ್ಥಗಳು:
ಆಲೂಗಡ್ಡೆ – 3
ಖಾರದ ಪುಡಿ – 2 ಚಮಚ
ಕಬಾಬ್ ಪೌಡರ್ – 1 ಚಮಚ
ಮೈದಾ ಹಿಟ್ಟು – 4 ಚಮಚ
ಅಕ್ಕಿ ಹಿಟ್ಟು – 2 ಚಮಚ
ಕಾರ್ನ್ ಫ್ಲೋರ್ – 1 ಚಮಚ
ಅರಿಶಿಣದ ಪುಡಿ – ಸ್ವಲ್ಪ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು ಬೇಕಾದಷ್ಟು
ಮಾಡುವ ವಿಧಾನ:
ಮೊದಲು ಆಲೂಗಡ್ಡೆಗಳನ್ನು ತೊಳೆದು, ಸಣ್ಣ ಹೋಳುಗಳಾಗಿ ಕತ್ತರಿಸಿಕೊಳ್ಳಿ. ಒಂದು ಪಾತ್ರೆಯಲ್ಲಿ ನೀರು ಹಾಕಿ ಆಲೂಗಡ್ಡೆ ಹೋಳುಗಳನ್ನು 2–3 ನಿಮಿಷ ಬೇಯಿಸಿ, ನಂತರ ನೀರು ತೆಗೆಯಿರಿ.
ಇನ್ನೊಂದು ಪಾತ್ರೆಯಲ್ಲಿ ಮೈದಾ, ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್, ಖಾರದ ಪುಡಿ, ಕಬಾಬ್ ಪೌಡರ್, ಅರಿಶಿಣ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಗೂ ಉಪ್ಪು ಹಾಕಿ ಕಲಸಿಕೊಳ್ಳಿ. ಈ ಮಿಶ್ರಣಕ್ಕೆ ಸ್ವಲ್ಪ ನೀರು ಸೇರಿಸಿ ಗಟ್ಟಿಯಾದ ಪೇಸ್ಟ್ ಮಾಡಿ. ಬೇಯಿಸಿದ ಆಲೂಗಡ್ಡೆ ಹೋಳುಗಳನ್ನು ಇದರಲ್ಲಿ ಚೆನ್ನಾಗಿ ಹೊರಳಾಡಿಸಿ ತಯಾರಿಸಿಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಕಾದ ಮೇಲೆ ಆಲೂಗಡ್ಡೆ ಹೋಳುಗಳನ್ನು ಒಂದೊಂದಾಗಿ ಹಾಕಿ, ಬಂಗಾರದ ಬಣ್ಣ ಬರುವವರೆಗೆ ಕರಿಯಿರಿ.

