Friday, December 26, 2025

FOOD | ಐದು ನಿಮಿಷದಲ್ಲಿ ರೆಡಿಯಾಗುತ್ತೆ ಪಂಜಾಬಿ ಸ್ಟೈಲ್ ಪನೀರ್ ಭುರ್ಜಿ!

ಮನೆಯಲ್ಲೇ ರುಚಿಕರವಾದ, ಆರೋಗ್ಯಕರವಾದ ಮತ್ತು ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಇಷ್ಟಪಡುವ ಖಾದ್ಯವನ್ನೊಂದು ಮಾಡ್ಬೇಕೆಂದರೆ ಪನೀರ್ ಅತ್ಯುತ್ತಮ ಆಯ್ಕೆ. ಹಾಲಿನಿಂದ ತಯಾರಾಗುವ ಪನೀರ್‌ನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಸೇರಿದಂತೆ ಅನೇಕ ಪೋಷಕಾಂಶಗಳು ದೊರೆಯುತ್ತವೆ. ವಿಶೇಷವಾಗಿ ಪಂಜಾಬಿ ಶೈಲಿಯ ಪನೀರ್ ಭುರ್ಜಿ ಸ್ಯಾಂಡ್‌ವಿಚ್, ಚಪಾತಿ ಅಥವಾ ಪರೋಟಕ್ಕೆ ಪರ್ಫೆಕ್ಟ್ ಸೈಡ್ ಡಿಶ್.

ಬೇಕಾಗುವ ಸಾಮಗ್ರಿಗಳು:

ಪನೀರ್ – 200 ಗ್ರಾಂ
ಎಣ್ಣೆ – 1–2 ಚಮಚ
ಜೀರಿಗೆ – ½ ಚಮಚ
ಹಸಿರು ಮೆಣಸಿನಕಾಯಿ – 2
ಈರುಳ್ಳಿ – 1
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಟೊಮೇಟೊ – 1
ಅರಶಿಣ ಪುಡಿ – ¼ ಚಮಚ
ಗರಂಮಸಾಲ ಪುಡಿ – ½ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ಮಾಡುವ ವಿಧಾನ:

ಮೊದಲು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ ಹಾಕಿ. ನಂತರ ಹೆಚ್ಚಿದ ಈರುಳ್ಳಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಈರುಳ್ಳಿ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ. ಬಳಿಕ ಹಸಿರು ಮೆಣಸಿನಕಾಯಿ ಮತ್ತು ಟೊಮೇಟೊ ಸೇರಿಸಿ ಟೊಮೇಟೊ ಮೆತ್ತಗಾಗುವವರೆಗೆ ಬೇಯಿಸಿ.

ಈಗ ಅರಶಿಣ ಪುಡಿ, ಗರಂಮಸಾಲ ಪುಡಿ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ನಂತರ ತುರಿದ ಪನೀರ್ ಹಾಕಿ 4–5 ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ.

error: Content is protected !!