ಬೆಳಗಿನ ಉಪಾಹಾರ ಅನ್ನೋದು ದಿನವಿಡೀ ಚುರುಕು ತರುವ ಶಕ್ತಿ ನೀಡುತ್ತದೆ. ದಿನಾಲೂ ಒಂದೇ ರೀತಿಯ ತಿಂಡಿ ತಿನ್ನೋ ಬದಲು, ಹೊಸತಾಗಿ ಮತ್ತು ಆರೋಗ್ಯಕರವಾಗಿ ತಯಾರಿಸಬಹುದಾದ ಮಶ್ರೂಮ್ ಸ್ಯಾಂಡ್‌ವಿಚ್ ಒಮ್ಮೆ ಟ್ರೈ ಮಾಡಬಹುದು.
ಬೇಕಾಗುವ ಸಾಮಗ್ರಿಗಳು:
ಹೆಚ್ಚಿದ ಅಣಬೆಗಳು – 250 ಗ್ರಾಂ
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಬೆಳ್ಳುಳ್ಳಿ – 1
ಚಿಲ್ಲಿ ಫ್ಲೇಕ್ಸ್ – 1 ಚಮಚ
ಒರಿಗ್ಯಾನೋ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ಬ್ರೆಡ್ – 4
ತುರಿದ ಚೀಸ್ – ¼ ಕಪ್
ಮಾಡುವ ವಿಧಾನ:
ಮೊದಲು ಒಂದು ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಹಾಕಿ, ಅದರಲ್ಲಿ ಹೆಚ್ಚಿದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಹಾಕಿ ಹುರಿಯಿರಿ. ಹಸಿವಾಸನೆ ಹೋದ ನಂತರ ಹೆಚ್ಚಿದ ಅಣಬೆ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಅದಕ್ಕೆ ಉಪ್ಪು, ಚಿಲ್ಲಿ ಫ್ಲೇಕ್ಸ್ ಮತ್ತು ಒರಿಗ್ಯಾನೋ ಸೇರಿಸಿ.
ನಂತರ ಇದಕ್ಕೆ ತುರಿದ ಚೀಸ್ ಹಾಕಿ ಮಿಶ್ರಣ ತಯಾರಿಸಿಕೊಳ್ಳಿ. ಒಂದು ಬ್ರೆಡ್ ಸ್ಲೈಸ್ ಮೇಲೆ ಈ ಮಿಶ್ರಣವನ್ನು ಹಚ್ಚಿ, ಮತ್ತೊಂದು ಬ್ರೆಡ್‌ನಿಂದ ಮುಚ್ಚಿ. ಇದನ್ನು ಸ್ಯಾಂಡ್‌ವಿಚ್ ಮೇಕರ್ ಅಥವಾ ಗ್ರಿಲ್ ಪ್ಯಾನ್‌ನಲ್ಲಿ ಬೇಯಿಸಿ.