Wednesday, September 10, 2025

FOOD | ಮಕ್ಕಳ ಫೆವರೀಟ್ ಸಿಹಿಯಾದ ಶಂಕರಪಾಳಿ ಸುಲಭವಾಗಿ ಮಾಡೋದು ಹೇಗೆ ಅಂತ ಇಲ್ನೋಡಿ!

ಸಂಜೆ ಸಮಯದಲ್ಲಿ ಮನೆಗೆ ಬರುವ ಅತಿಥಿಗಳು, ನೆರೆಹೊರೆಯವರು, ಹಾಸ್ಟೆಲ್‌ನಿಂದ ಮನೆಗೆ ಬರುವ ಮಕ್ಕಳು ಎಲ್ಲರಿಗೂ ರುಚಿಯಾದ ತಿಂಡಿ ಬೇಕಾಗುತ್ತದೆ. ಈ ಸಂದರ್ಭ ತಾಯಂದಿರಿಗೆ ಒಂದೇ ಚಿಂತೆ – ಯಾವ ಹೊಸ ಸಿಹಿತಿಂಡಿಯನ್ನು ಮಾಡಬೇಕು ಎಂಬುದು. ಅಷ್ಟೇ ಅಲ್ಲ, ಹೆಚ್ಚು ಸಮಯ ತೆಗೆದುಕೊಳ್ಳದೇ ಸುಲಭವಾಗಿ ಮಾಡುವಂಥದ್ದೂ ಆಗಿರಬೇಕು. ಇಂತಹ ಸಂದರ್ಭದಲ್ಲಿ ಶಂಕರಪಾಳಿ ಒಳ್ಳೆಯ ಆಯ್ಕೆ. ಇದು ಕ್ರಂಚಿಯಾಗಿ, ಸಿಹಿಯಾಗಿ ಎಲ್ಲರಿಗೂ ಇಷ್ಟವಾಗುವ ತಿಂಡಿ.

ಬೇಕಾಗುವ ಸಾಮಗ್ರಿಗಳು

ಮೈದಾ ಅಥವಾ ಗೋಧಿ ಹಿಟ್ಟು – 2 ಕಪ್
ಬಾಂಬೆ ರವೆ – ಅರ್ಧ ಕಪ್
ಕೊಬ್ಬರಿ ತುರಿ – ಅರ್ಧ ಕಪ್
ಸಕ್ಕರೆ – 1 ಕಪ್ (ರುಚಿಗೆ ತಕ್ಕಂತೆ)
ಏಲಕ್ಕಿ – 4
ಅಡುಗೆ ಸೋಡಾ – ¼ ಟೀಸ್ಪೂನ್
ಉಪ್ಪು – ಒಂದು ಚಿಟಿಕೆ
ತುಪ್ಪ – 3 ಟೀಸ್ಪೂನ್
ಸೋಂಪು – 1 ಟೀಸ್ಪೂನ್
ಎಣ್ಣೆ – ಕರಿಯಲು ಬೇಕಾದಷ್ಟು

ತಯಾರಿಸುವ ವಿಧಾನ

ಮೊದಲು ಮಿಕ್ಸರ್‌ನಲ್ಲಿ ಸಕ್ಕರೆ, ಕೊಬ್ಬರಿ ಹಾಗೂ ಏಲಕ್ಕಿ ಹಾಕಿ ನುಣ್ಣಗೆ ರುಬ್ಬಿ.

ಈಗ ಒಂದು ಬೌಲ್‌ನಲ್ಲಿ ಹಿಟ್ಟು, ರವೆ, ಸಕ್ಕರೆ ಮಿಶ್ರಣ, ಉಪ್ಪು, ಅಡುಗೆ ಸೋಡಾ ಸೇರಿಸಿ. ಅದಕ್ಕೆ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ಸ್ವಲ್ಪ ನೀರು ಹಾಕಿ ಮೃದುವಲ್ಲದ ಅರೆಮೃದುವಾದ ಹಿಟ್ಟಾಗುವಂತೆ ಮಿಕ್ಸ್ ಮಾಡಿ. ಹಿಟ್ಟನ್ನು ಮುಚ್ಚಿ 15–20 ನಿಮಿಷ ನೆನೆಯಲು ಬಿಡಿ. ಬಳಿಕ ಸೋಂಪು ಸೇರಿಸಿ ಮತ್ತೊಮ್ಮೆ ಕಲಸಿ.

ಚಪಾತಿ ಮಣೆ ಮೇಲೆ ಹಿಟ್ಟು ತೆಳುವಾಗಿ ಲಟ್ಟಿಸಿ, ವಜ್ರಾಕಾರದ ತುಂಡುಗಳಾಗಿ ಕತ್ತರಿಸಿ. ಎಣ್ಣೆ ಬಿಸಿ ಮಾಡಿದ ಮೇಲೆ ತುಂಡುಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ. ತಣ್ಣಗಾದ ಮೇಲೆ ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ.

ಇದನ್ನೂ ಓದಿ