March 31, 2026
Tuesday, March 31, 2026
spot_img

FOOD | ಮನೆಯಲ್ಲೇ ರೆಡಿ ಆಗುತ್ತೆ ಟೇಸ್ಟಿ ಆಂಧ್ರ ಸ್ಟೈಲ್ ಪಾಲಕ್ ದಾಲ್

ಆಂಧ್ರ ಶೈಲಿಯ ಅಡುಗೆ ಎಂದರೆ ಏನೋ ಒಂದು ವಿಭಿನ್ನ ರುಚಿ. ಅದರಲ್ಲಿ ಪಾಲಕ್ ದಾಲ್ ತುಂಬಾ ಜನಪ್ರಿಯವಾದ, ಆರೋಗ್ಯಕರ ಮತ್ತು ರುಚಿಕರ ಡಿಶ್. ಅನ್ನ, ರೊಟ್ಟಿ ಅಥವಾ ಜೋಳದ ರೊಟ್ಟಿಯ ಜೊತೆಗೆ ಇದನ್ನು ಸವಿದರೆ ಅದ್ಭುತವಾಗಿರುತ್ತೆ.

ಬೇಕಾಗುವ ಸಾಮಗ್ರಿಗಳು

ತೊಗರಿ ಬೇಳೆ – 1 ಕಪ್
ಪಾಲಕ್ ಸೊಪ್ಪು – 2 ಕಪ್ (ಸಣ್ಣದಾಗಿ ಕತ್ತರಿಸಿದ್ದು)
ಈರುಳ್ಳಿ – 1 (ಚೂರು ಮಾಡಿದದ್ದು)
ಟೊಮ್ಯಾಟೊ – 1
ಹಸಿಮೆಣಸು – 2
ಅರಿಶಿನ – ¼ ಟೀ ಸ್ಪೂನ್
ಹುಣಸೆಹಣ್ಣು ರಸ – 1 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು

ಒಗ್ಗರಣೆಗೆ

ಎಣ್ಣೆ ಅಥವಾ ತುಪ್ಪ – 2 ಟೀ ಸ್ಪೂನ್
ಸಾಸಿವೆ – ½ ಟೀ ಸ್ಪೂನ್
ಜೀರಿಗೆ – ½ ಟೀ ಸ್ಪೂನ್
ಒಣ ಮೆಣಸು – 2
ಬೆಳ್ಳುಳ್ಳಿ – 4 ಕಾಳು
ಕರಿಬೇವು – ಸ್ವಲ್ಪ
ಕೆಂಪು ಖಾರದ ಪುಡಿ – ½ ಟೀ ಸ್ಪೂನ್
ಮಾಡುವ ವಿಧಾನ

ಮೊದಲು ತೊಗರಿ ಬೇಳೆಯನ್ನು ತೊಳೆದು ಕುಕ್ಕರ್‌ಗೆ ಹಾಕಿ. ಅದಕ್ಕೆ ಅರಿಶಿನ, ಟೊಮ್ಯಾಟೊ, ಹಸಿಮೆಣಸು ಮತ್ತು ಸ್ವಲ್ಪ ನೀರು ಸೇರಿಸಿ 3–4 ವಿಶಿಲ್ ಬರುವವರೆಗೆ ಬೇಯಿಸಿ.

ನಂತರ ಒಂದು ಪಾತ್ರೆಯಲ್ಲಿ ಕತ್ತರಿಸಿದ ಪಾಲಕ್ ಸೊಪ್ಪನ್ನು ಸ್ವಲ್ಪ ನೀರಿನಲ್ಲಿ 3–4 ನಿಮಿಷ ಬೇಯಿಸಿ. ಬೇಯಿಸಿದ ಬೇಳೆಯನ್ನು ಚೆನ್ನಾಗಿ ಮ್ಯಾಶ್ ಮಾಡಿ ಪಾಲಕ್ ಜೊತೆ ಸೇರಿಸಿ.

ಇದಕ್ಕೆ ಹುಣಸೆಹಣ್ಣಿನ ರಸ ಮತ್ತು ಉಪ್ಪು ಹಾಕಿ 5 ನಿಮಿಷ ಕುದಿಯಲು ಬಿಡಿ.

ಈಗ ಒಗ್ಗರಣೆ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಒಣ ಮೆಣಸು ಮತ್ತು ಕರಿಬೇವು ಹಾಕಿ. ಕೊನೆಯಲ್ಲಿ ಖಾರದ ಪುಡಿ ಹಾಕಿ ತಕ್ಷಣ ದಾಲ್ ಮೇಲೆ ಸುರಿಯಿರಿ.

ಬಿಸಿ ಬಿಸಿ ಅನ್ನದ ಜೊತೆ ಆಂಧ್ರ ಸ್ಟೈಲ್ ಪಾಲಕ್ ದಾಲ್ ಸವಿಯಲು ಸಿದ್ಧ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !