March 26, 2026
Thursday, March 26, 2026
spot_img

FOOD | ಕ್ರೀಮಿ & ರಿಚ್ ಆಗಿರೋ ಈ ಆಲೂ ಕೋಫ್ತಾ ತಿಂದ್ರೆ ನಿಮ್ಮ ಮನೆಯವ್ರು ಫುಲ್ ಹ್ಯಾಪಿ

ಒಮ್ಮೆ ಆಲೂ ಕೋಫ್ತಾ ತಿಂದ್ರೆ, ಮತ್ತೆ ಮತ್ತೆ ತಿನ್ನಬೇಕು ಅನ್ನಿಸೋ ರುಚಿ ಇದು! ಹೊರಗೆ ಹೋಟೆಲ್‌ನಲ್ಲಿ ಸಿಗೋ ರಿಚ್ ಗ್ರೇವಿ, ಸಾಫ್ಟ್ ಕೋಫ್ತಾ ಈ ಡಿಶ್ ನಲ್ಲಿ ನಿಮಗೆ ಸಿಗುತ್ತೆ. ಮನೆಲ್ಲೇ ಸುಲಭವಾಗಿ ಮಾಡ್ಕೊಂಡ್ರೆ ಫ್ಯಾಮಿಲಿ ಫುಲ್ ಹ್ಯಾಪಿ.

ಕೋಫ್ತಾ ಹೇಗೆ ಮಾಡೋದು?
3 ಬೇಯಿಸಿದ ಆಲೂಗಡ್ಡೆಯನ್ನು ಚೆನ್ನಾಗಿ ಮ್ಯಾಶ್ ಮಾಡಿ, ಅದಕ್ಕೆ ಉಪ್ಪು, ಮೆಣಸಿನ ಪುಡಿ, ಗರಂ ಮಸಾಲಾ, ಸ್ವಲ್ಪ ಕಾರ್ನ್‌ಫ್ಲೋರ್ ಹಾಕಿ ಮೃದುವಾಗಿ ಮಿಶ್ರಣ ಮಾಡಿ ಚಿಕ್ಕ ಉಂಡೆಗಳಾಗಿ ಮಾಡಿ. ಬಿಸಿ ಎಣ್ಣೆಯಲ್ಲಿ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಕರಿಯಿರಿ.

ಕ್ರಿಸ್ಪಿ ಹೊರಗೆ, ಸಾಫ್ಟ್ ಒಳಗೆ – ಇದೇ ಕೋಫ್ತಾ ಸೀಕ್ರೆಟ್!

ಗ್ರೇವಿಗೆ ರಿಚ್ ಟೇಸ್ಟ್ ಸೀಕ್ರೆಟ್ ಇಲ್ಲಿದೆ!

ಪ್ಯಾನ್‌ನಲ್ಲಿ ಎಣ್ಣೆ/ಬೆಣ್ಣೆ ಹಾಕಿ ಈರುಳ್ಳಿ ಪೇಸ್ಟ್ ಫ್ರೈ ಮಾಡಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಸುವಾಸನೆ ಬರುವವರೆಗೆ ಬೇಯಿಸಿ
ಟೊಮಾಟೊ ಪೇಸ್ಟ್ ಹಾಕಿ ಚೆನ್ನಾಗಿ ಕುದಿಸಿ
ಮೆಣಸಿನ ಪುಡಿ, ಅರಿಶಿನ, ಧನಿಯಾ ಪುಡಿ ಸೇರಿಸಿ
ಕಾಜು ಪೇಸ್ಟ್ ಹಾಕಿದ್ರೆ ಗ್ರೇವಿ ಸೂಪರ್ ರಿಚ್ ಆಗುತ್ತೆ
ಕೊನೆಗೆ ಕ್ರೀಮ್ ಸೇರಿಸಿ ಸ್ಮೂತ್ ಫಿನಿಷ್ ಕೊಡಿ

ಫೈನಲ್ ಟಚ್:
ಸರ್ವ್ ಮಾಡುವಾಗ ಮಾತ್ರ ಕೋಫ್ತಾ ಉಂಡೆಗಳನ್ನು ಗ್ರೇವಿಗೆ ಹಾಕಿ
ಮೇಲಿಂದ ಕೊತ್ತಂಬರಿ + ಕ್ರೀಮ್ ಡ್ರಿಜಲ್ ಮಾಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !