ಎಳೆ ಹಲಸಿನ ಕಾಯಿ ಬಳಸಿ ಮಾಡುವ ರವಾ ಫ್ರೈ ಒಂದು ಅದ್ಭುತ ವೆಜ್ ಸ್ನ್ಯಾಕ್. ಹೊರಗೆ ಕ್ರಿಸ್ಪಿ, ಒಳಗೆ ಮೃದುವಾಗಿಯೂ ಇರುವ ಈ ಡಿಶ್ ಮೀನಿನ ಫ್ರೈ ಗಿಂತನೂ ಅದ್ಭುತ ರುಚಿ ಕೊಡುತ್ತೆ. ಟೀ ಟೈಮ್‌ಗೆ, ಊಟದ ಜೊತೆಗೆ ಅಥವಾ ಅತಿಥಿಗಳಿಗೆ ಸರ್ವ್ ಮಾಡಲು ಇದು ಪರ್ಫೆಕ್ಟ್ ಸೈಡ್ ಡಿಶ್.
ಬೇಕಾಗುವ ಪದಾರ್ಥಗಳು
ಎಳೆ ಹಲಸಿನ ಕಾಯಿ – 1 ಕಪ್ (ತೆಳ್ಳಗೆ ಉದ್ದಾಗಿ ಸ್ಲೈಸ್ ಮಾಡಿದ್ದು)
ರವಾ – 4 ಟೇಬಲ್ ಸ್ಪೂನ್
ಖಾರದ ಪುಡಿ – 1 ಟೀ ಸ್ಪೂನ್
ಮಸಾಲಾ ಪುಡಿ – ½ ಟೀ ಸ್ಪೂನ್ (ಐಚ್ಛಿಕ)
ಜೀರಿಗೆ ಹುಡಿ – ½ ಟೀ ಸ್ಪೂನ್
ಇಂಗಿನ ಹುಡಿ – ಒಂದು ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಫ್ರೈ ಮಾಡಲು
ಮಾಡುವ ವಿಧಾನ
ಮೊದಲು ಎಳೆ ಹಲಸಿನ ಸಿಪ್ಪೆ ತೆಗೆದು, ಮಧ್ಯದಲ್ಲಿರುವ ಗಟ್ಟಿ ಭಾಗವನ್ನು ತೆಗೆದು. ನಂತರ ಅದನ್ನು ತೆಳ್ಳಗೆ, ಉದ್ದುದ್ದವಾಗಿ ಸ್ಲೈಸ್ ಮಾಡಿಕೊಂಡು ಎತ್ತಿಟ್ಟುಕೊಳ್ಳಿ.
ಒಂದು ಬಟ್ಟಲಿನಲ್ಲಿ ರವಾ, ಖಾರದ ಪುಡಿ, ಉಪ್ಪು, ಮಸಾಲಾ ಪುಡಿ, ಜೀರಿಗೆ ಹುಡಿ ಮತ್ತು ಇಂಗಿನ ಹುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಕತ್ತರಿಸಿದ ಹಲಸಿನ ಕಾಯಿಯ ತುಂಡುಗಳನ್ನು ಈ ರವಾ ಮಿಶ್ರಣದೊಳಗೆ ಹಾಕಿ ಚೆನ್ನಾಗಿ ಕಲಸಿ. ಮಿಶ್ರಣ ಸರಿಯಾಗಿ ಅಂಟಿಕೊಳ್ಳದಿದ್ದರೆ ಸ್ವಲ್ಪ ಎಣ್ಣೆ ಸವರಿ, ಮತ್ತೆ ರವದಲ್ಲಿ ಉರುಳಿಸಿ. ಈಗ ತವಾ ಬಿಸಿ ಮಾಡಿ ಸ್ವಲ್ಪ ಎಣ್ಣೆ ಹಾಕಿ. ಅದರ ಮೇಲೆ ರವಾ ಲೇಪಿತ ಹಲಸಿನ ತುಂಡುಗಳನ್ನು ಒಂದೊಂದಾಗಿ ಇಡಿ. ಮಧ್ಯಮ ಉರಿಯಲ್ಲಿ ನಿಧಾನವಾಗಿ ತಿರುಗಿಸುತ್ತಾ ಬೇಯಿಸಿ.
ಬೇಯುವಾಗ ಸ್ವಲ್ಪ ಉಪ್ಪಿನ ನೀರನ್ನು ಚಿಮುಕಿಸಿದರೆ ಒಳಗೂ ಉಪ್ಪಿನ ರುಚಿ ಹೀರಿಕೊಳ್ಳುತ್ತದೆ. ಎರಡೂ ಬದಿಗಳು ಗೋಲ್ಡನ್ ಬಣ್ಣಕ್ಕೆ ಬಂದರೆ ಫ್ರೈ ಸಿದ್ಧ.



