ರುಚಿಕರವಾದ ಹಾಗೂ ಜೀರ್ಣಕ್ರಿಯೆಗೆ ಸಹಾಯಕವಾದ ಪುದೀನಾ ರಸಂ ಬಿಸಿಬಿಸಿ ಅನ್ನಕ್ಕೆ ಸೂಪರ್ ಕಾಂಬಿನೇಷನ್. ಇದನ್ನ ಊಟದ ಕೊನೆಯಲ್ಲಿ ಕುಡಿಯಬಹುದು ಅಥವಾ ಆರಂಭದಲ್ಲಿ ಸೂಪ್ ನಂತೆಯೂ ಸೇವಿಸಬಹುದು ಇದು ತುಂಬಾ ಚೆನ್ನಾಗಿರುತ್ತದೆ.
ಬೇಕಾದ ಪದಾರ್ಥಗಳು
ಪುದೀನಾ ಎಲೆ – ಒಂದು ಕಪ್
ನೀರು – 2 ಕಪ್
ಟೊಮೇಟೊ – 1 (ಐಚ್ಛಿಕ)
ಹುಣಸೆ ಹಣ್ಣು – ಸಣ್ಣ ನಿಂಬೆ ಗಾತ್ರ
ಹಸಿಮೆಣಸು – 1
ಬೆಳ್ಳುಳ್ಳಿ – 3–4 ಕಾಳು
ಜೀರಿಗೆ – 1 ಟೀಸ್ಪೂನ್
ಮೆಣಸು – ½ ಟೀಸ್ಪೂನ್
ರಸಂ ಪುಡಿ – 1 ಟೀಸ್ಪೂನ್
ಉಪ್ಪು – ರುಚಿಗೆ
ಎಣ್ಣೆ/ತುಪ್ಪ – 1 ಟೀಸ್ಪೂನ್
ಸಾಸಿವೆ – ½ ಟೀಸ್ಪೂನ್
ಕರಿಬೇವು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಮಾಡುವ ವಿಧಾನ
ಮೊದಲು ಪುದೀನಾ ಎಲೆ, ಜೀರಿಗೆ, ಮೆಣಸು, ಹಸಿಮೆಣಸು ಮತ್ತು ಬೆಳ್ಳುಳ್ಳಿಯನ್ನು ಸ್ವಲ್ಪ ನೀರಿನಲ್ಲಿ ನುಣ್ಣಗೆ ಅರೆದುಕೊಳ್ಳಿ. ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ಹುಣಸೆ ನೀರು, ಹಾಗೂ ಅರೆದ ಪುದೀನಾ ಮಿಶ್ರಣ ಸೇರಿಸಿ. ಮಧ್ಯಮ ಉರಿಯಲ್ಲಿ ಕುದಿಯಲು ಬಿಡಿ. ಈಗ ರಸಂ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
ಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ, ಸಾಸಿವೆ ಸಿಡಿಸಿ, ಕರಿಬೇವು ಹಾಕಿ ಈ ಒಗ್ಗರಣೆಯನ್ನು ರಸಂಗೆ ಸೇರಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ ಉರಿ ಆರಿಸಿ.

