ದೇಹಕ್ಕೆ ತಂಪು ನೀಡುವ, ಹೊಟ್ಟೆಗೆ ಹಗುರವಾಗಿರುವ ಮೂಲಂಗಿ ಪಚಡಿ ಒಮ್ಮೆ ಟ್ರೈ ಮಾಡಿ. ದಕ್ಷಿಣ ಭಾರತೀಯ ಊಟದಲ್ಲಿ ಸಾಂಬಾರ್–ಅನ್ನ ಅಥವಾ ಮೊಸರನ್ನದ ಜೊತೆ ಈ ಪಚಡಿ ತುಂಬಾ ಚೆನ್ನಾಗಿ ಹೊಂದುತ್ತದೆ. ತಯಾರಿಸಲು ಸುಲಭ, ಸಮಯವೂ ಕಡಿಮೆ. ದಿನನಿತ್ಯದ ಅಡುಗೆಗೆ ಸೂಕ್ತವಾದ ಪಚಡಿ ಇದು.
ಬೇಕಾಗುವ ಪದಾರ್ಥಗಳು:
ಮೂಲಂಗಿ – 1 ಕಪ್
ಮೊಸರು – 1 ಕಪ್
ಹಸಿಮೆಣಸು – 1
ಜೀರಿಗೆ – 1 ಟೀಸ್ಪೂನ್
ತೆಂಗಿನಕಾಯಿ ತುರಿ – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ
ಎಣ್ಣೆ – 1 ಟೀಸ್ಪೂನ್
ಸಾಸಿವೆ – ½ ಟೀಸ್ಪೂನ್
ಒಣ ಮೆಣಸು – 1
ಕರಿಬೇವು – ಸ್ವಲ್ಪ
ಮಾಡುವ ವಿಧಾನ:
ಮೊದಲು ಮೂಲಂಗಿಯನ್ನು ತುರಿದುಕೊಳ್ಳಿ. ಈಗ ಮಿಕ್ಸಿ ಜಾರ್ ಗೆ ಹಸಿಮೆಣಸು, ಜೀರಿಗೆ ಮತ್ತು ತೆಂಗಿನಕಾಯಿ ತುರಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಒಣ ಮೆಣಸು ಮತ್ತು ಕರಿಬೇವು ಹಾಕಿ ಈಗ ತೆಂಗಿನಕಾಯಿ ಮಿಶ್ರಣ ಹಾಕಿ ಜೊತೆಗೆ ತುರಿದ ಮೂಲಂಗಿ ಸೇರಿಸಿ ಸ್ವಲ್ಪ ಫ್ರೈ ಮಾಡಿದರೆ ಮೂಲಂಗಿ ಪಚಡಿ ರೆಡಿ.

