Sunday, September 21, 2025

FOOD | ಫಟಾಫಟ್ ಅಂತ ರೆಡಿ ಆಗುತ್ತೆ ಈ ಟೊಮೆಟೋ ದೋಸೆ! ನೀವೂ ಒಮ್ಮೆ ಟ್ರೈ ಮಾಡಿ

ದೋಸೆ ಅಂದ್ರೆ ಎಲ್ಲರಿಗು ಇಷ್ಟ. ಈ ದೋಸೆಯಲ್ಲಿ ಹಲವಾರು ವಿಧಗಳಿವೆ. ಸೆಟ್ ದೋಸೆ, ಪುದೀನಾ ದೋಸೆ, ಈರುಳ್ಳಿ ದೋಸೆ, ಗ್ರೀನ್ ಪೀಸ್ ದೋಸೆ, ಖಾಲಿ ದೋಸೆ… ಹೀಗೆ ಪಟ್ಟಿ ಎಣಿಸಲಾಗದು. ಆದರೆ, ಈ ಎಲ್ಲದಕ್ಕಿಂತಲೂ ವಿಭಿನ್ನ ಹಾಗೂ ರುಚಿಕರವಾಗಿರುವುದು ಟೊಮೆಟೋ ದೋಸೆ. ಇವತ್ತು ಮಾಡೋದು ಹೇಗೆ ಅಂತ ನೋಡೋಣ.

ಬೇಕಾಗುವ ಪದಾರ್ಥಗಳು:

ಟೊಮೆಟೋ-2
ಕೆಂಪು ಮೆಣಸು-4
ಶುಂಠಿ- ಸ್ವಲ್ಪ
ರವೆ- ಅರ್ಧ ಕಪ್
ಗೋಧಿ ಹಿಟ್ಟು- ಸರ್ಧ ಕಪ್
ಈರುಳ್ಳಿ- 1
ದನಿಯಾ- ಸ್ವಲ್ಪ
ಜೀರಿಗೆ- 1ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಅಡುಗೆ ಎಣ್ಣೆ- ಅರ್ಧ ಕಪ್

ಮಾಡುವ ವಿಧಾನ:

ಮೊದಲಿಗೆ ಮಿಕ್ಸರ್‌ನಲ್ಲಿ ಟೊಮೆಟೋ, ಕೆಂಪು ಮೆಣಸು ಹಾಗೂ ಶುಂಠಿಯನ್ನು ನೀರು ಹಾಕದೆ ರುಬ್ಬಿಕೊಳ್ಳಿ. ನಂತರ ಈ ಪೇಸ್ಟ್‌ಗೆ ಅರ್ಧ ಕಪ್ ರವೆ, ಅರ್ಧ ಕಪ್ ಗೋಧಿ ಹಿಟ್ಟು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು.

ನಂತರ ಈ ಮಿಶ್ರಣಕ್ಕೆ ತುರಿದ ಈರುಳ್ಳಿ, ಧನಿಯಾ ಪುಡಿ, ಜೀರಿಗೆ ಹಾಗೂ ಉಪ್ಪು ಸೇರಿಸಿ ಬೇಕಾದಷ್ಟು ನೀರು ಹಾಕಿ ದೋಸೆ ತಯಾರಿಗೆ ಸೂಕ್ತವಾಗುವ ಮಿಶ್ರಣ ಮಾಡಿಕೊಳ್ಳಬೇಕು.

ಈಗ ದೋಸೆ ಕಾವಲಿ ಬಿಸಿಮಾಡಿ, ಸ್ವಲ್ಪ ಎಣ್ಣೆ ಸವರಿ ದೋಸೆ ಮಿಶ್ರಣವನ್ನು ಸಾದವಾಗಿ ಹರಡಿ ಎರಡು ಬದಿ ಬೇಯಿಸಿದರೆ ಬಿಸಿ ಬಿಸಿ ಟೊಮೆಟೋ ದೋಸೆ ತಿನ್ನಲು ರೆಡಿ.

ಇದನ್ನೂ ಓದಿ