ಮಧ್ಯಾಹ್ನದ ಊಟಕ್ಕೆ ರುಚಿಯ ಜೊತೆಗೆ ಹೊಟ್ಟೆ ತುಂಬುವ ಕರಿಯೊಂದನ್ನು ಹುಡುಕುತ್ತಿದ್ದರೆ, ಆಲೂ ಕುರ್ಮಾ ಬೆಸ್ಟ್. ಮೃದುವಾದ ಆಲೂಗಡ್ಡೆ, ತೆಂಗಿನಕಾಯಿ ಮಸಾಲೆಯ ಜತೆ ಸೇರಿದ ಈ ಕುರ್ಮಾ ಅನ್ನ, ಚಪಾತಿ ಅಥವಾ ರೊಟ್ಟಿ ಜೊತೆಗೆ ಚೆನ್ನಾಗಿ ಹೊಂದುತ್ತದೆ.
ಅವಶ್ಯಕ ಪದಾರ್ಥಗಳು:
ಆಲೂಗಡ್ಡೆ – 3
ಈರುಳ್ಳಿ – 1
ಟೊಮೆಟೊ – 1
ಹಸಿಮೆಣಸು – 2
ಶುಂಠಿ – 1 ಇಂಚು
ಎಣ್ಣೆ – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯವಷ್ಟು
ಮಸಾಲೆ:
ತೆಂಗಿನಕಾಯಿ ತುರಿ – ಅರ್ಧ ಕಪ್
ಗಸಗಸೆ – 1 ಟೀ ಸ್ಪೂನ್
ಜೀರಿಗೆ – 1 ಟೀ ಸ್ಪೂನ್
ಸೋಂಪು – ½ ಟೀ ಸ್ಪೂನ್
ಹುರಿದ ಕಡಲೆ – 2 ಟೇಬಲ್ ಸ್ಪೂನ್
ಮಾಡುವ ವಿಧಾನ:
ಮೊದಲು ಆಲೂಗಡ್ಡೆಯನ್ನು ತೊಳೆದು ತುಂಡುಗಳಾಗಿ ಕತ್ತರಿಸಿ ಬೇಯಿಸಿಕೊಂಡು ಬದಿಗಿಡಿ. ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಗಸಗಸೆ, ಜೀರಿಗೆ, ಸೋಂಪು ಮತ್ತು ಹುರಿದ ಕಡಲೆ ಸೇರಿಸಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ.
ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಣ್ಣಗೆ ಕತ್ತರಿಸಿದ ಈರುಳ್ಳಿ ಹಾಕಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ. ನಂತರ ಶುಂಠಿ–ಹಸಿಮೆಣಸು ಪೇಸ್ಟ್ ಸೇರಿಸಿ. ಟೊಮೆಟೊ ಹಾಕಿ ಮೃದುವಾಗುವವರೆಗೆ ಬೇಯಿಸಿ.
ಇದಕ್ಕೆ ಬೇಯಿಸಿದ ಆಲೂಗಡ್ಡೆ ಸೇರಿಸಿ, ಅರೆದ ಮಸಾಲೆ ಹಾಕಿ ಚೆನ್ನಾಗಿ ಕಲಸಿ. ಅಗತ್ಯವಿದ್ದಷ್ಟು ನೀರು ಸೇರಿಸಿ ಉಪ್ಪು ಹಾಕಿ 5–7 ನಿಮಿಷ ಕುದಿಯಲು ಬಿಡಿ. ಎಣ್ಣೆ ಮೇಲಕ್ಕೆ ತೇಲಿದರೆ ಆಲೂ ಕುರ್ಮಾ ಸಿದ್ಧ.


