ಪ್ರತಿದಿನ ಚಿಕನ್, ಮಟನ್ ತಿಂದು ಬೋರಗಿದ್ಯಾ? ಹೊಸದಾಗಿ ಏನಾದ್ರೂ ಟ್ರೈ ಮಾಡ್ಬೇಕು ಅನಿಸುತ್ತಿದೆಯಾ? ಹಾಗಿದ್ರೆ ಇವತ್ತಿನ ನಮ್ಮ ವಿಶೇಷ ರೆಸಿಪಿ ನಿಮ್ಮಿಗಷ್ಟೆ! ಕಡಿಮೆ ಸಮಯದಲ್ಲಿ ತಯಾರಿಸಬಹುದಾದ, ಬಾಯಲ್ಲಿ ನೀರು ತರಿಸುವ ಸಿಗಡಿ ಸುಕ್ಕಾ (Prawns Sukka) ರೆಸಿಪಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
ಸಿಗಡಿ – ಅರ್ಧ ಕೆಜಿ
ಈರುಳ್ಳಿ – 1
ಟೊಮೆಟೊ – 1
ಹಸಿಮೆಣಸು – 2
ತೆಂಗಿನತುರಿ – 1 ಕಪ್
ಅಡುಗೆ ಎಣ್ಣೆ – ಅರ್ಧ ಕಪ್
ಅರಿಶಿಣ ಪುಡಿ – ಅರ್ಧ ಚಮಚ
ದನಿಯಾ ಪೌಡರ್ – ಸ್ವಲ್ಪ
ಹುಣಸೆ ಹಣ್ಣು – ಸ್ವಲ್ಪ
ನಿಂಬೆಹಣ್ಣು – 1
ಕರಿಬೇವು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಮೊದಲು ಒಂದು ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಕರಿಬೇವು ಮತ್ತು ತೆಂಗಿನತುರಿ ಸೇರಿಸಿ ಸ್ವಲ್ಪ ಬಣ್ಣ ಬದಲಾದರೆ ತನಕ ಹುರಿದು ಬೇರೆಡೆ ಇಟ್ಟುಕೊಳ್ಳಿ. ಅದೇ ಬಾಣಲೆಗೆ ಉಳಿದ ಎಣ್ಣೆ ಹಾಕಿ ಕರಿಬೇವು, ಸ್ಲೈಸ್ ಮಾಡಿದ ಈರುಳ್ಳಿ ಹಾಕಿ ಬಣ್ಣ ಬದಲಾಗುವ ತನಕ ಹುರಿದುಕೊಳ್ಳಿ.
ಈಗ ತೊಳೆದು ಸ್ವಚ್ಛಗೊಳಿಸಿದ ಸಿಗಡಿ ಸೇರಿಸಿ, ಉಪ್ಪು, ಅರಿಶಿಣ ಪುಡಿ, ಹಸಿಮೆಣಸು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಪಾತ್ರೆಯನ್ನು ಮುಚ್ಚಿ ಬೇಯಿಸಿ. ಈಗ ದನಿಯಾ ಪುಡಿ, ಹುಣಸೆರಸ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಮಧ್ಯಮ ಉರಿಯಲ್ಲಿ ಬೇಯಿಸಿ. ಸಿಗಡಿ ಬೆಂದ ನಂತರ ಹುರಿದು ಇಟ್ಟ ತೆಂಗಿನತುರಿ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಕಲಸಿ, ಸುಕ್ಕಾ ಸ್ವಲ್ಪ ಗಟ್ಟಿಯಾಗುವ ತನಕ ಬೇಯಿಸಿ.

