Tuesday, November 11, 2025

FOOD | ನಾರ್ತ್ ಇಂಡಿಯನ್ ಸ್ಟೈಲ್ ಕಡಿ ರೆಸಿಪಿ ಒಮ್ಮೆ ಟ್ರೈ ಮಾಡಿ! ಸೂಪರ್ ಟೇಸ್ಟ್

ಬಿಸಿ ಅನ್ನದ ಜೊತೆಗೆ ತಿನ್ನಲು ಸೂಪರ್ ಕಾಂಬೋ ಎಂದರೆ ಅದು ಕಡಿ! ಅದರಲ್ಲೂ ಉತ್ತರ ಭಾರತದ ಕಡಿ ತುಂಬಾನೇ ರುಚಿ ಕೊಡುತ್ತದೆ. ಮೊಸರು ಮತ್ತು ಕಡಲೆಹಿಟ್ಟುಗಳಿಂದ ತಯಾರಾಗುವ ಈ ರೆಸಿಪಿ ರುಚಿಯಲ್ಲೂ, ಆರೋಗ್ಯದಲ್ಲೂ ತುಂಬಾ ವಿಶಿಷ್ಟ.

ಬೇಕಾಗುವ ಪದಾರ್ಥಗಳು:

ಮೊಸರು – 1 ಕಪ್
ಕಡಲೆಹಿಟ್ಟು – 2 ಟೇಬಲ್ ಸ್ಪೂನ್
ನೀರು – 2 ಕಪ್
ಹಸಿಮೆಣಸು – 2
ಶುಂಠಿ – 1 ಇಂಚು ತುಂಡು
ಅರಿಶಿನ – ¼ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕರಿ ಮೆಣಸು ಪುಡಿ – ½ ಟೀ ಸ್ಪೂನ್
ಸಾಸಿವೆ – ½ ಟೀ ಸ್ಪೂನ್
ಜೀರಿಗೆ – ½ ಟೀ ಸ್ಪೂನ್
ಮೆಣಸಿನ ಕಾಯಿ – 2
ಕರಿಬೇವು – 6-7 ಎಲೆ
ಎಣ್ಣೆ ಅಥವಾ ತುಪ್ಪ – 2 ಟೀ ಸ್ಪೂನ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ಮಾಡುವ ವಿಧಾನ:

ಮೊಸರು ಮತ್ತು ಕಡಲೆಹಿಟ್ಟನ್ನು ಒಂದು ಪಾತ್ರೆಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ, ಯಾವುದೇ ಗಡ್ಡೆ ಇರದಂತೆ ಬೆರೆಸಿ. ಅದಕ್ಕೆ ನೀರು, ಅರಿಶಿನ, ಉಪ್ಪು ಮತ್ತು ಶುಂಠಿ ಪೇಸ್ಟ್ ಸೇರಿಸಿ.

ಈ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಇಟ್ಟು ನಿಧಾನವಾಗಿ ಕುದಿಯಲು ಬಿಡಿ. ಮಧ್ಯೆ ಮಧ್ಯೆ ಕೈ ಹಾಕಿ ಕಲಸುತ್ತಿರಿ 10–15 ನಿಮಿಷಗಳವರೆಗೆ ಬೇಯಿಸಿರಿ.

ಒಂದು ಚಿಕ್ಕ ಪ್ಯಾನ್‌ನಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಜೀರಿಗೆ, ಒಣ ಮೆಣಸಿನ ಕಾಯಿ ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿ. ಕುದಿಯುತ್ತಿರುವ ಕಡಿಗೆ ಹಾಕಿ ಚೆನ್ನಾಗಿ ಮಿಶ್ರಣಿಸಿ.

ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಅನ್ನದ ಜೊತೆಗೆ ಅಥವಾ ರೋಟಿಯ ಜೊತೆ ಸರ್ವ್ ಮಾಡಿ.

error: Content is protected !!