March 6, 2026
Friday, March 6, 2026
spot_img

FOOD | ಚಟ್ ಪಟ & ಹೆಲ್ದಿ ಸ್ನ್ಯಾಕ್ ಬೇಕಾ? ಹಾಗಿದ್ರೆ ಈ Garlic Soya Lemon ರೆಸಿಪಿ ಯಾರಿಗೆ?

ಸಂಜೆ ಟೀ ಜೊತೆ ತಿನ್ನೋಕೆ ಏನಾದ್ರೂ ಚಟ್ ಪಟ, ಪ್ರೋಟೀನ್ ತುಂಬಿರುವ ಸ್ನ್ಯಾಕ್ ಬೇಕಾ? ಹಾಗಿದ್ರೆ ಈ Garlic Soya Lemon ಸ್ನ್ಯಾಕ್ ಟ್ರೈ ಮಾಡಿ. ಬೆಳ್ಳುಳ್ಳಿ, ಲೆಮನ್, ಸೋಯಾ ಚಂಕ್ಸ್‌ನ ಸಾಫ್ಟ್ ಟೆಕ್ಸ್ಚರ್ ಇವುಗಳ ಕಾಂಬಿನೇಶನ್ ಬಾಯಲ್ಲಿ ನೀರೂರಿಸುವಂತಿರುತ್ತೆ. ಜಿಮ್ ಹೋಗೋರಿಗೂ ಇದು ಒಳ್ಳೆಯ ಹೈ-ಪ್ರೋಟೀನ್ ಸ್ನ್ಯಾಕ್.

ಬೇಕಾಗುವ ಪದಾರ್ಥಗಳು:

ಸೋಯಾ ಚಂಕ್ಸ್ – 1 ಕಪ್
ಬೆಳ್ಳುಳ್ಳಿ – 5-6 ಎಸಳು
ಲೆಮನ್ ರಸ – 1 ಟೇಬಲ್ ಸ್ಪೂನ್
ಮೆಣಸಿನ ಪುಡಿ – ½ ಟೀ ಸ್ಪೂನ್
ಮೆಣಸು ಪುಡಿ – ¼ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 1 ಟೇಬಲ್ ಸ್ಪೂನ್
ಕರಿಬೇವು – ಸ್ವಲ್ಪ

ಮಾಡುವ ವಿಧಾನ:

ಮೊದಲು ಸೋಯಾ ಚಂಕ್ಸ್‌ನ್ನು ಬಿಸಿ ನೀರಿನಲ್ಲಿ 5 ನಿಮಿಷ ನೆನೆಸಿ, ನಂತರ ಚೆನ್ನಾಗಿ ಒತ್ತಿ ನೀರು ತೆಗೆದಿಡಿ.

ಪ್ಯಾನ್‌ನಲ್ಲಿ ಎಣ್ಣೆ ಹಾಕಿ, ಬೆಳ್ಳುಳ್ಳಿ ಮತ್ತು ಕರಿಬೇವು ಹಾಕಿ ಸಣ್ಣಗೆ ಹುರಿಯಿರಿ. ಈಗ ಸೋಯಾ ಚಂಕ್ಸ್ ಹಾಕಿ 3–4 ನಿಮಿಷ ಚೆನ್ನಾಗಿ ಫ್ರೈ ಮಾಡಿ. ಉಪ್ಪು, ಮೆಣಸಿನ ಪುಡಿ ಮತ್ತು ಮೆಣಸು ಪುಡಿ ಹಾಕಿ ಮಿಕ್ಸ್ ಮಾಡಿ.

ಕೊನೆಯಲ್ಲಿ ಗ್ಯಾಸ್ ಆಫ್ ಮಾಡಿದ ಮೇಲೆ ಲೆಮನ್ ರಸ ಹಿಂಡಿ ಚೆನ್ನಾಗಿ ಮಿಕ್ಸ್ ಮಾಡಿ. ಬಿಸಿ ಬಿಸಿ ಸರ್ವ್ ಮಾಡಿದರೆ, ಇದು ಸಂಜೆ ಟೈಮ್‌ಗೆ ಪರ್ಫೆಕ್ಟ್ ಸ್ನ್ಯಾಕ್ ಆಗುತ್ತದೆ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !