ಕಡಲ ತೀರದ ಹಳ್ಳಿಯ ಮನೆಗಳಲ್ಲಿ ಭಾನುವಾರದ ಊಟಕ್ಕೆ ಸಿಗುವ ವಿಶೇಷ ಐಟಂ ಅಂದ್ರೆ ಅದು ಕಾಣೆ ಮೀನಿನ ಫ್ರೈ. ಒಂದು ತುಂಡು ಬಾಯಿಗೆ ಹೋದ್ರೆ, “ಇನ್ನೊಂದು ಪೀಸ್ ಕೊಡ್ರಿ” ಅನ್ನೋದು ಗ್ಯಾರಂಟಿ.
ಬೇಕಾಗುವ ಸಾಮಗ್ರಿಗಳು:
ಕಾಣೆ ಮೀನು – 500 ಗ್ರಾಂ
ಅರಿಶಿನ ಪುಡಿ – ½ ಚಮಚ
ಕೆಂಪು ಮೆಣಸಿನ ಪುಡಿ – 1½ ಚಮಚ
ಧನಿಯಾ ಪುಡಿ – 1 ಚಮಚ
ಜೀರಿಗೆ ಪುಡಿ – ½ ಚಮಚ
ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ನಿಂಬೆ ರಸ – 1 ಚಮಚ
ಉಪ್ಪು – ರುಚಿಗೆ ತಕ್ಕಂತೆ
ಅಕ್ಕಿಹಿಟ್ಟು – 2 ಚಮಚ
ಎಣ್ಣೆ – ಫ್ರೈ ಮಾಡಲು
ಕರಿಬೇವು – ಸ್ವಲ್ಪ (ಐಚ್ಛಿಕ)
ತಯಾರಿಸುವ ವಿಧಾನ
ಮೊದಲು ಕಾಣೆ ಮೀನನ್ನು ಚೆನ್ನಾಗಿ ತೊಳೆದುಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ಅರಿಶಿನ, ಮೆಣಸಿನ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಅಕ್ಕಿಹಿಟ್ಟು ಸೇರಿಸಿ ಗಟ್ಟಿಯಾದ ಮಸಾಲೆ ತಯಾರಿಸಿ.
ಈ ಮಸಾಲೆಯನ್ನು ಮೀನಿಗೆ ಚೆನ್ನಾಗಿ ಲೇಪಿಸಿ ಕನಿಷ್ಠ 15–20 ನಿಮಿಷ ಮ್ಯಾರಿನೇಟ್ ಆಗಲು ಬಿಡಿ. ತವಾದಲ್ಲಿ ಎಣ್ಣೆ ಬಿಸಿ ಮಾಡಿ, ಮಧ್ಯಮ ಉರಿಯಲ್ಲಿ ಮೀನನ್ನು ಒಂದೊಂದಾಗಿ ಹಾಕಿ. ಎರಡೂ ಕಡೆ ಚಿನ್ನದ ಬಣ್ಣ ಬರುವವರೆಗೆ ನಿಧಾನವಾಗಿ ಫ್ರೈ ಮಾಡಿ. ಕೊನೆಯಲ್ಲಿ ಕರಿಬೇವು ಹಾಕಿದ್ರೆ ಘಮ ಇನ್ನಷ್ಟು ಹೆಚ್ಚಾಗುತ್ತೆ.



