Saturday, October 11, 2025

FOOD | ಉತ್ತರ ಕರ್ನಾಟಕ ಸ್ಪೆಷಲ್ ಗಿರ್ಮಿಟ್ ತಿಂದಿದ್ದೀರಾ? ಒಮ್ಮೆ ಟ್ರೈ ಮಾಡಿ!

ಉತ್ತರ ಕರ್ನಾಟಕದ ಜನಪ್ರಿಯ ಸ್ಟ್ರೀಟ್ ಫುಡ್ ಗಿರ್ಮಿಟ್ ತಿಂದಿದ್ದೀರಾ? ಒಮ್ಮೆ ತಿಂದು ನೋಡಿ ಪದೇ ಪದೇ ನೀವೇ ಮಾಡ್ಕೊಂಡು ತಿಂತಿರಾ. ಟೀ ಜೊತೆ ಸವಿಯಲು ಸೂಕ್ತವಾದ ಸಿಂಪಲ್ ಗಿರ್ಮಿಟ್ ಮಾಡುವ ವಿಧಾನ ಇಲ್ಲಿದೆ ನೋಡಿ.

ಬೇಕಾಗುವ ಸಾಮಾಗ್ರಿಗಳು:

ಮಂಡಕ್ಕಿ/ಕಡಲೆಪುರಿ – 3 ಕಪ್
ಹುಣಸೆ ರಸ – ¼ ಕಪ್
ಟೊಮೇಟೊ – 1 (ಸಣ್ಣಗೆ ಕತ್ತರಿಸಿದ)
ಈರುಳ್ಳಿ – 2 (ಸಣ್ಣಗೆ ಹಚ್ಚಿದ)
ಕೊತ್ತಂಬರಿ ಸೊಪ್ಪು – ಸ್ವಲ್ಪ
ಹುರಿಗಡಲೆ ಪುಡಿ – 2 ಚಮಚ
ಹಸಿರು ಮೆಣಸಿನಕಾಯಿ – 3
ಎಣ್ಣೆ – 2 ಚಮಚ
ಜೀರಿಗೆ – 2 ಚಮಚ
ಸಾಸಿವೆ – 2 ಚಮಚ
ಬೆಲ್ಲ – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕರಿಬೇವು – ಸ್ವಲ್ಪ
ಅರಿಶಿಣ ಪುಡಿ – ¼ ಚಮಚ
ಸೇವ್/ಖಾರ ಬೂಂದಿ – ಟಾಪಿಂಗ್‌ಗಾಗಿ

ಮಾಡುವ ವಿಧಾನ:

ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ನಂತರ ಸಾಸಿವೆ, ಜೀರಿಗೆ ಹಾಕಿ ಒಗ್ಗರಣೆ ಮಾಡಿ.ಅದಕ್ಕೆ ಹಸಿರು ಮೆಣಸಿನಕಾಯಿ, ಕರಿಬೇವು ಹಾಕಿ ಸ್ವಲ್ಪ ಹುರಿದುಕೊಳ್ಳಿ. ಈಗ ಅರಿಶಿಣ ಮತ್ತು ಈರುಳ್ಳಿಯ ಅರ್ಧ ಭಾಗವನ್ನು ಸೇರಿಸಿ 2 ನಿಮಿಷ ಫ್ರೈ ಮಾಡಿ. ನಂತರ ಹುಣಸೆರಸ, ಬೆಲ್ಲ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಈ ಮಿಶ್ರಣ ಸ್ವಲ್ಪ ಗಟ್ಟಿಯಾಗಿದರೆ ಒಲೆಯಿಂದ ಕೆಳಗಿಳಿಸಿ. ಇದು ಗಿರ್ಮಿಟ್ ಮಸಾಲಾ.ಈಗ ಒಂದು ದೊಡ್ಡ ಪಾತ್ರೆಯಲ್ಲಿ ಮಂಡಕ್ಕಿ ಹಾಕಿ ಅದಕ್ಕೆ ಈ ಮಸಾಲಾ, ಉಳಿದ ಈರುಳ್ಳಿ, ಟೊಮೇಟೊ, ಹುರಿಗಡಲೆ ಪುಡಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿ. ಕೊನೆಯಲ್ಲಿ ಸೇವ್ ಅಥವಾ ಖಾರ ಬೂಂದಿ ಉದುರಿಸಿ ಸರ್ವ್ ಮಾಡಿ.

error: Content is protected !!