February 3, 2026
Tuesday, February 3, 2026
spot_img

ದಿನಭವಿಷ್ಯ: ಆರ್ಥಿಕವಾಗಿ ಇಂದು ಸದೃಢ ದಿನ, ಟೀಕಾಕಾರರ ಬಾಯಿ ಮುಚ್ಚಿಸುವ ಸಮಯ

ಮೇಷ
 ಕುಟುಂಬ ಸದಸ್ಯರ ಕುರಿತಂತೆ ಏನೋ ಚಿಂತೆ. ಆದರೆ ಕಳವಳ ಬೇಡ. ಶೀಘ್ರವೆ ಮಾನಸಿಕ ನೆಮ್ಮದಿ ದೊರಕುವ ಬೆಳವಣಿಗೆ ಸಂಭವಿಸಲಿದೆ.    
ವೃಷಭ
ಖಾಸಗಿ ಬದುಕಲ್ಲಿ ಪೂರಕ ಬೆಳವಣಿಗೆ. ಸ್ವಂತ ಉದ್ಯೋಗ ಹೊಂದಿದವರಿಗೆ ಲಾಭ. ಕೆಲಸಕ್ಕೆ ಉಂಟಾಗಿದ್ದ ಅಡೆತಡೆ ನಿವಾರಣೆ.
ಮಿಥುನ
ಕುಟುಂಬಸ್ಥರ ಜತೆ ವ್ಯವಹಾರದಲ್ಲಿ ಪ್ರಾಮಾಣಿಕತೆ ಇರಲಿ. ಮುಚ್ಚುಮರೆ ಮಾಡಿದರೆ ಪ್ರತಿಕೂಲ ಪರಿಣಾಮ ಎದುರಿಸುವಿರಿ.  
ಕಟಕ
ಸಂಗಾತಿ ಜತೆಗೆ ಸಂಘರ್ಷ ಸಂಭವ. ಒಬ್ಬರಾದರೂ ಬಿಗುಮಾನ ಬಿಟ್ಟು ವರ್ತಿಸಬೇಕು. ನಿಮ್ಮ ಮೂಗಿನ ನೇರಕ್ಕೆ ಚಿಂತಿಸದಿರಿ.  
ಸಿಂಹ
ಆರ್ಥಿಕ ಪರಿಸ್ಥಿತಿ ಉನ್ನತಿ ಕಾಣುವುದು. ಉದ್ಯೋಗದಲ್ಲಿ ಹೊಸ ಅವಕಾಶ ತೆರೆಯಲಿದೆ. ಇತರರ ಸಂತೋಷದಲ್ಲಿ ತೃಪ್ತಿ ಕಾಣುವಿರಿ.
ಕನ್ಯಾ
ಸಂಬಂಧದಲ್ಲಿ ಅಪಸ್ವರ. ಆಪ್ತರ ಜತೆಗಿನ ವರ್ತನೆಯಲ್ಲಿ ಅದು ಪ್ರತಿ-ಲಿಸಲಿದೆ.  ಅದೃಷ್ಟ ನಂಬಿ ಕೂರಬೇಡಿ. ನಿಮ್ಮ ಪ್ರಯತ್ನ ಅವಶ್ಯ.
ತುಲಾ
ವೃತ್ತಿಯಲ್ಲಿ,   ಕುಟುಂಬದಲ್ಲಿ ಅನ್ಯೋನ್ಯತೆ ಹೆಚ್ಚಿಸಿಕೊಳ್ಳಿ. ಪುಟ್ಟ ವಿಷಯ ಮನಸ್ಸು ಕೆಡಿಸದಂತೆ ಎಚ್ಚರ ವಹಿಸಿ. ಹೊಣೆ ನಿಭಾಯಿಸುವಲ್ಲಿ  ಸಂತೃಪ್ತಿ.
ವೃಶ್ಚಿಕ
ಕೆಲ ವಿಚಾರಗಳಿಂದ ಮಾನಸಿಕ ಒತ್ತಡ. ಇನ್ನಿತರ ವಿಷಯದ ಬಗ್ಗೆ ಗಮನ ಹರಿಯದು. ಶಾಂತಚಿತ್ತರಾಗಿ ಯೋಚಿಸಿ ಕಾರ್ಯ ಎಸಗಿ.          
ಧನು
ಆರ್ಥಿಕ ಸ್ಥಿರತೆ.  ಸಂಗಾತಿ ಜತೆಗೆ ಉತ್ತಮ ಹೊಂದಾಣಿಕೆ. ಕರ್ತವ್ಯ ನಿಭಾವಣೆಯಲ್ಲಿ ಮೆಚ್ಚುಗೆ ಗಳಿಸುವಿರಿ. ಟೀಕಾಕಾರರು ಮೌನವಾಗುವರು.  
ಮಕರ
ಉತ್ಸಾಹದ ದಿನ. ವಾಗ್ವಾದದಲ್ಲಿ ತೊಡಗಿ ದಿನ ಕೆಡಿಸಿಕೊಳ್ಳದಿರಿ. ಮೋಜು ಮಾಡಲು ಹೋಗಿ ಹಣ ಕಳಕೊಂಡೀರಿ, ಎಚ್ಚರಿಕೆ. ಖರ್ಚಿಗೆ ಕಡಿವಾಣವಿರಲಿ.      
ಕುಂಭ
   ನಿಮ್ಮ ಸುತ್ತಲಿನ ವ್ಯಕ್ತಿಗಳ ಜತೆ ಸಂಬಂಧ ಸುಧಾರಣೆ. ಮನಸ್ತಾಪ ಅಂತ್ಯ.  ಹಣಕಾಸು ಪರಿಸ್ಥಿತಿ ಸ್ಥಿರ. ಆರೋಗ್ಯ ಸಮಸ್ಯೆ ನಿವಾರಣೆ.  
  ಮೀನ
ಪರಿಹಾರವಾಗದೆ ಉಳಿದಿದ್ದ ಬಿಕ್ಕಟ್ಟು ಇಂದು ಅಂತ್ಯ ಕಂಡೀತು. ಆದರೆ ನೀವೂ ಸ್ವಲ್ಪ ಮಟ್ಟಿನ ಹಾನಿ ಅನುಭವಿಸುವಿರಿ. ಹೊಂದಾಣಿಕೆ ಒಳಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !