ಹೊಸದಿಗಂತ ಡಿಜಿಟಲ್ ಡೆಸ್ಕ್:
ನಂಜೇದೇವನಪುರ ಗ್ರಾಮದ ಜನರಲ್ಲಿ ಆತಂಕ ಮೂಡಿಸಿದ್ದ ಹುಲಿ ಕುಟುಂಬದ ಸೆರೆ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಮತ್ತೊಂದು ಯಶಸ್ಸು ಕಂಡಿದೆ. ಸೋಮವಾರ (ಜ. 26) ತಡರಾತ್ರಿ ಇಲಾಖೆ ಇರಿಸಿದ್ದ ಬೋನಿನಲ್ಲಿ ಮತ್ತೊಂದು ಹುಲಿ ಮರಿ ಸೆರೆಯಾಗಿದೆ.
ಒಂದು ಗಂಡು ಹುಲಿ, ತಾಯಿ ಹುಲಿ ಹಾಗೂ ಇದುವರೆಗೆ ಒಟ್ಟು ಮೂರು ಮರಿಗಳನ್ನು ಸೆರೆಹಿಡಿಯಲಾಗಿದೆ.
ಸೋಮವಾರ ರಾತ್ರಿ ಕಾರ್ಯಾಚರಣೆಯ ಭಾಗವಾಗಿ ಇರಿಸಿದ್ದ ಬೋನಿಗೆ ಮತ್ತೊಂದು ಮರಿ ಬಿದ್ದಿದ್ದು, ಒಟ್ಟು ವಶಪಡಿಸಿಕೊಂಡ ಹುಲಿಗಳ ಸಂಖ್ಯೆ ಆರಕ್ಕೇರಿದೆ. ಇನ್ನು ಕೇವಲ ಒಂದು ಮರಿ ಮಾತ್ರ ಪತ್ತೆಯಾಗಬೇಕಿದೆ.
ಕೊನೆಯದಾಗಿ ಉಳಿದಿರುವ ಆ ಒಂದು ಮರಿಯನ್ನು ಶೀಘ್ರವಾಗಿ ಪತ್ತೆಹಚ್ಚಲು ಅರಣ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಕಾರ್ಯಾಚರಣೆಗಾಗಿ ನಾಲ್ಕು ಸಾಕಾನೆಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ದಟ್ಟ ಅರಣ್ಯ ಪ್ರದೇಶದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಹುಲಿ ಹಾವಳಿ ತಗ್ಗಿಸಲು ಇಲಾಖೆ ಹಗಲಿರುಳು ಶ್ರಮಿಸುತ್ತಿದ್ದು, ಶೀಘ್ರದಲ್ಲೇ ಪೂರ್ಣ ಕುಟುಂಬವನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ವಿಶ್ವಾಸದಲ್ಲಿದೆ.



