March 12, 2026
Thursday, March 12, 2026
spot_img

ಮುಂಡಾಜೆ- ಧರ್ಮಸ್ಥಳ ರಸ್ತೆ ಬಳಿ ಕಾಡ್ಗಿಚ್ಚು: ಅಗ್ನಿಶಾಮಕ ದಳ ಸಿಬ್ಬಂದಿ ದೌಡು

ಹೊಸದಿಗಂತ ವರದಿ, ಬೆಳ್ತಂಗಡಿ

ಬೆಳ್ತಂಗಡಿ ತಾಲೂಕಿನ ಮುಂಡಾಜೆ-ಕಲ್ಮಂಜ- ಧರ್ಮಸ್ಥಳ ರಸ್ತೆಯ ಮುಂಡಾಜೆ ಗ್ರಾಮದ ಮೈರಣಗುಡ್ಡೆಗೆ ಬೆಂಕಿ ಬಿದ್ದ ಘಟನೆ ಶನಿವಾರ ರಾತ್ರಿ ನಡೆದಿದೆ.

ಬೆಂಕಿ ಗುಡ್ಡವನ್ನು ವ್ಯಾಪಿಸಿದ್ದು, ಸ್ಥಳೀಯರು ಹಾಗೂ ಅಗ್ನಿಶಾಮಕ ದಳದಿಂದ ಬೆಂಕಿ ಹತೋಟಿಯ ಯತ್ನ ಮುಂದುವರಿದಿದೆ. ಬೆಂಕಿ ಆರಿಸುವ ವೇಳೆ ಸ್ಥಳೀಯ ವ್ಯಕ್ತಿಯೊಬ್ಬರು ಸುಮಾರು 20 ಅಡಿಯಿಂದ ಜಾರಿ ಬಿದ್ದ ಘಟನೆಯು ನಡೆದಿದ್ದು, ಅದೃಷ್ಟವಶಾತ್ ಗಾಯಗೊಳ್ಳದೆ ಅಪಾಯದಿಂದ ಪಾರಾಗಿದ್ದಾರೆ.

ಗುಡ್ಡವನ್ನು ಸುಟ್ಟ ಬೆಂಕಿ ಸಮೀಪದಲ್ಲಿರುವ ರಬ್ಬರ್ ತೋಟಕ್ಕೂ ವ್ಯಾಪಿಸಿದ್ದು ರಬ್ಬರ್ ಗಿಡಗಳಿಗೂ ಹಾನಿ ಉಂಟಾಗಿದೆ. ಬೆಂಕಿ ಯಾವ ಕಾರಣದಿಂದ ಉಂಟಾಗಿದೆ ಎಂದು ತಿಳಿದು ಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !