ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಟಿ, ಟಿವಿ ಕಾರ್ಯಕ್ರಮಗಳ ನಿರೂಪಕಿ,ಬಿಗ್ ಬಾಸ್ ಮಾಜಿ ಸ್ಫರ್ಧಿ ಸಾರಾ ಖಾನ್ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.
ಹಿಂದಿ ಬಾಗ್ ಬಾಸ್ ನಾಲ್ಕನೇ ಆವೃತ್ತಿಯಲ್ಲಿ ಕಾಣಿಸಿಕೊಂಡ ಸಾರಾ ಖಾನ್ ಇದೀಗ ರಾಮಾಯಾಣ ಖ್ಯಾತಿಯ ಸುನಿಲ್ ಲಹ್ರಿ ಪುತ್ರ ಕೃಷ್ ಪಾಠಕ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸಾರಾ ಖಾನ್ ಮುಸ್ಲಿಂ ಹಾಗೂ ಕೃಷ್ ಪಾಠಕ್ ಹಿಂದು. ಹೀಗಾಗಿ ಈ ಜೋಡಿ ಹಿಂದು ಹಾಗೂ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಮದುವೆ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ನವ ಜೋಡಿಗೆ ಹಲವರು ಶುಭ ಹಾರೈಸಿದ್ದಾರೆ.
ಕೃಷ್ ಪಾಠಕ್ ಹಾಗೂ ಸಾರಾ ಖಾನ್ ರಿಜಿಸ್ಟರ್ಡ್ ಮ್ಯಾರೇಜ್ ಅಕ್ಟೋಬರ್ 6 ರಂದು ನಡೆದಿತ್ತು. ಅಕ್ಟೋಬರ್ ತಿಂಗಳಲ್ಲೇ ತಮ್ಮ ವಿಹಾಹ ನೋಂದಣಿ ಕುರಿತು ಫೋಟೋ ಪೋಸ್ಟ್ ಮಾಡಿದ್ದರು. ಇದೀಗ 2 ತಿಂಗಳ ಬಳಿಕ ಈ ಜೋಡಿ ಅದ್ಧೂರಿಯಾಗಿ ವಿವಾಹ ಮಹೋತ್ಸವ ಆಯೋಜಿಸಿದೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೃಷ್ ಪಾಠಕ್ ಹಾಗೂ ಸಾರಾ ಖಾನ್ ಲವ್ ಸ್ಟೋರಿ ಈಗಿನ ಜೆನ್ ಝಿ ಸ್ಟೋರಿಯಾಗಿದೆ. ಕಾರಣ ಈ ಜೋಡಿ ಡೇಟಿಂಗ್ ಆ್ಯಪ್ ಮೂಲಕ ಆತ್ಮೀಯರಾಗಿದ್ದಾರೆ. ಇಬ್ಬರಿಗೂ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿತ್ತು. ಬಳಿಕ ಅಷ್ಟೇ ಬೇಗ ಇವರ ರಿಲೇಶನ್‌ಶಿಪ್ ಗಟ್ಟಿಗೊಂಡಿತ್ತು.
ಸಾರಾ ಖಾನ್ ಹಾಗೂ ಕೃಷ್ ಪಾಠಕ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ತಮ್ಮ ರಿಲೇಶನ್‌ಶಿಪ್ ಕುರಿತು ಕುಟಂಬಸ್ಥರಿಗೆ ಮಾಹಿತಿ ನೀಡಿ ಎರಡೂ ಕುಟುಂಬಸ್ಥರು ಒಪ್ಪಿಸಿ ಮದುವೆಯಾಗಿದ್ದಾರೆ.

