February 25, 2026
Wednesday, February 25, 2026
spot_img

SHOCKING | ಹೊಟೇಲ್ ನಲ್ಲಿ ಶವವಾಗಿ ಪತ್ತೆಯಾದ ಜಾರ್ಖಂಡ್‌ ಮಾಜಿ ಸಿಎಂ ಮೊಮ್ಮಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಅವರ ಮೊಮ್ಮಗ , ಬಾಬುಲಾಲ್ ಸೊರೆನ್ ಅವರ ಪುತ್ರ ವೀರ್ ಸೊರೆನ್ ಅವರು ಮನಾಲಿ ಹೊಟೇಲ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ವೀರ್ ಸೊರೆನ್(19) ಫೆಬ್ರವರಿ 22 ರಂದು ತಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಸಿಮ್ಸಾದ ಹೊಟೇಲ್ ನಲ್ಲಿ ತಂಗಿದ್ದರು. ಫೆಬ್ರವರಿ 23 ರಂದು ಹಮ್ತಾ ಪಾಸ್ ಬಳಿಯ ಸೋಲಾಂಗ್ ಕಣಿವೆ ಮತ್ತು ಸೇಥನ್ ಗ್ರಾಮಕ್ಕೆ ಸ್ನೇಹಿತರೊಂದಿಗೆ ಭೇಟಿ ನೀಡಿದ್ದರು. ಬಳಿಕ ವೀರ್ ಅಸ್ವಸ್ಥರಾಗಿದ್ದರು .

ಪ್ರವಾಸದಿಂದ ಹಿಂದಿರುಗಿದ ನಂತರ, ವೀರ್ ಅವರಿಗೆ ತೀವ್ರ ತಲೆನೋವು ಕಾಣಿಸಿಕೊಂಡಿದೆ. ಅವರ ಸ್ನೇಹಿತರು ಅವರಿಗೆ ಔಷಧಿ ನೀಡಿದ್ದರು. ನಂತರ ಅವರು ವಿಶ್ರಾಂತಿ ಪಡೆಯಲು ನಿದ್ರೆಗೆ ಜಾರಿದರು. ತಡರಾತ್ರಿ ಅವರ ಆರೋಗ್ಯ ಹದಗೆಟ್ಟಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಟ್ಟಾಗ, ಅವರ ಸ್ನೇಹಿತರು ತಕ್ಷಣ ಅವರನ್ನು ಮನಾಲಿಯ ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಗೆ ಕರೆದೊಯ್ಯುವ ದಾರಿಯಲ್ಲಿ, ಅವರ ಬಾಯಿಯಿಂದ ನೊರೆ ಬರುತ್ತಿರುವುದು ಕಂಡುಬಂದಿದೆ. ಆಸ್ಪತ್ರೆಯಲ್ಲಿ, ವೈದ್ಯರು ದೀರ್ಘಕಾಲದವರೆಗೆ ಸಿಪಿಆರ್ ಮಾಡಿದರು. ಆದರೆ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಮತ್ತು ಅವರು ಮೃತಪಟ್ಟಿರುವುದಾಗಿ ಹೇಳಿದರು ಎಂದು ಸೊರೆನ್ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

ಆರಂಭಿಕ ತಪಾಸಣೆಯಲ್ಲಿ ದೇಹದ ಮೇಲೆ ಯಾವುದೇ ಬಾಹ್ಯ ಗಾಯಗಳು ಕಂಡುಬಂದಿಲ್ಲ. ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ವರದಿ ಬಂದ ನಂತರ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ. ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಅವರಿಗೆ ಹಸ್ತಾಂತರಿಸಲಾಗುವುದು ಎಂದು ಮನಾಲಿ ಡಿಎಸ್ಪಿ ಕೆ.ಡಿ. ಶರ್ಮಾ ತಿಳಿಸಿದ್ದಾರೆ.

ಮೊಮ್ಮಗನ ಸಾವಿಗೆ ಚಂಪೈ ಸೊರೆನ್ ಕಣ್ಣೀರಿಟ್ಟಿದ್ದು, ‘ನಮ್ಮ ಪ್ರೀತಿಯ ಮೊಮ್ಮಗ ವೀರ್ ಸೊರೆನ್ ಫೆಬ್ರವರಿ 24 ರಂದು ನಿಧನರಾದರು ಎಂದು ತಿಳಿಸಲು ನಮಗೆ ತುಂಬಾ ದುಃಖವಾಗುತ್ತಿದೆ. ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಅವರ ಆರೋಗ್ಯ ಹದಗೆಟ್ಟ ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವಿಧಿಯಾಟ ಅವರು ಬದುಕಲಿಲ್ಲ. ವೀರ್ ಅವರ ನಿಧನವು ನಮ್ಮ ಕುಟುಂಬವನ್ನು ಛಿದ್ರಗೊಳಿಸಿದೆ ಎಂದು ಪೋಸ್ಟ್ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !