ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2024ರಲ್ಲಿ ಆರ್ ಸಿ ಬಿ ತಂಡ ಕಪ್ ಗೆದ್ದ ನಂತರ, ಮುಂದಿನ ಸೀಸನ್‌ಗೂ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಈ ನಡುವೆ RCBಯಲ್ಲಿ ಸಾಮಾನ್ಯ ಪ್ರದರ್ಶನ ನೀಡಿದ್ದ ಫಿಲಿಪ್ ಸಾಲ್ಟ್ ಇದೀಗ ಅಬ್ಬರದ ಫಾರ್ಮ್ ತೋರಿಸಿದ್ದಾರೆ. ಶುಕ್ರವಾರ ಮ್ಯಾಂಚೆಸ್ಟರ್‌ನ ರಮಿರೇಟ್ಸ್ ಒಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಇಂಗ್ಲೆಂಡ್–ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಸಾಲ್ಟ್ ಕೇವಲ 60 ಎಸೆತಗಳಲ್ಲಿ 141 ರನ್ ಸಿಡಿಸಿ ದಾಖಲೆ ಬರೆದಿದ್ದಾರೆ.
ಸಾಲ್ಟ್ ಅವರ ಇನಿಂಗ್ಸ್‌ನಲ್ಲಿ 15 ಬೌಂಡರಿ ಹಾಗೂ 8 ಸಿಕ್ಸ್ ಸೇರಿದ್ದು, ಕೇವಲ 39 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಇಂಗ್ಲೆಂಡ್ ತಂಡ ಕೂಡ ಬಿರುಸಿನಿಂದ ಆಡುತ್ತಾ 20 ಓವರ್‌ಗಳಲ್ಲಿ 300 ರನ್‌ಗಳ ಗಡಿ ದಾಟಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದೆ.
ಈ ಬಾರಿಯ ಐಪಿಎಲ್‌ನಲ್ಲಿ ಆರ್ ಸಿ ಬಿ ತಂಡ 11.5 ಕೋಟಿ ರೂಪಾಯಿ ನೀಡಿ ಸಾಲ್ಟ್ ಅವರನ್ನು ಖರೀದಿಸಿತ್ತು. ಆರಂಭದಲ್ಲಿ ಉತ್ತಮ ಆಟ ತೋರಿದ್ದರೂ, ನಂತರ ಡಲ್ ಆಗಿ ಕೆಲ ಪಂದ್ಯಗಳಲ್ಲಿ ಅವರನ್ನು ಬೇಂಚ್‌ಗೆ ಕಳಿಸಲಾಗಿತ್ತು. ಅವರ ಗರಿಷ್ಠ ಸ್ಕೋರ್ ಕೇವಲ 65 ರನ್‌ಗಳಷ್ಟೇ ಆಗಿತ್ತು. ಈಗ ಅವರ ಈ ಸ್ಫೋಟಕ ಫಾರ್ಮ್ RCB ಅಭಿಮಾನಿಗಳಿಗೆ ಹೊಸ ಭರವಸೆ ಮೂಡಿಸಿದೆ.