Sunday, November 16, 2025

ಕೇಂದ್ರ ಮಾಜಿ ಸಚಿವ ಆರ್‌.ಕೆ.ಸಿಂಗ್‌ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಮಾಜಿ ಸಚಿವ ಆರ್‌.ಕೆ.ಸಿಂಗ್‌ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಬೆನ್ನಲ್ಲೇ ಬಿಜೆಪಿ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಬಿಹಾರದ ಹಿರಿಯ ರಾಜಕಾರಣಿ ಮಾಜಿ ಕೇಂದ್ರ ಸಚಿವ ಆರ್.ಕೆ.ಸಿಂಗ್, ಶಾಸಕಾಂಗ ಸದಸ್ಯರಾದ ಅಶೋಕ್ ಅಗರ್ವಾಲ್ ಮತ್ತು ಕಟಿಹಾರ್ ಮೇಯರ್ ಉಷಾ ಅಗರ್ವಾಲ್ ವಿರುದ್ಧ ಕ್ರಮಕೈಗೊಳ್ಳಲಾಗಿತ್ತು.

ಬಿಹಾರ ಬಿಜೆಪಿಯ ರಾಜ್ಯ ಪ್ರಧಾನ ಕಚೇರಿಯ ಉಸ್ತುವಾರಿ ಅರವಿಂದ್ ಶರ್ಮಾ ಇಂದು ಬೆಳಗ್ಗೆ ಈ ಮೂವರು ನಾಯಕರಿಗೆ ನೋಟಿಸ್ ಜಾರಿ ಮಾಡಿದ್ದರು. ನಿಮ್ಮನ್ನು ಪಕ್ಷದಿಂದ ಏಕೆ ಹೊರಹಾಕಬಾರದು ಎಂಬ ಬಗ್ಗೆ ಒಂದು ವಾರದೊಳಗೆ ವಿವರಿಸುವಂತೆ ಕೇಳಿದ್ದಾರೆ.

ಇದೀಗ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಬಿಹಾರದ ಅರ್ರಾ ಕ್ಷೇತ್ರದ ಮಾಜಿ ಸಂಸದ ಸಿಂಗ್, 2024 ರ ಚುನಾವಣೆಯಲ್ಲಿ ಸೋತಾಗಿನಿಂದ ಬಿಜೆಪಿ ಮತ್ತು ಬಿಹಾರ ಸರ್ಕಾರದ ವಿರುದ್ಧ ಟೀಕಾಕಾರರಾಗಿದ್ದರು. ಬಿಹಾರದಲ್ಲಿ ಎನ್‌ಡಿಎ ನಾಯಕತ್ವ ಮತ್ತು ಕೆಲವು ಮಿತ್ರಪಕ್ಷಗಳ ಅಭ್ಯರ್ಥಿಗಳ ವಿಶ್ವಾಸಾರ್ಹತೆಯನ್ನು ಸಿಂಗ್ ಪ್ರಶ್ನಿಸುತ್ತಿದ್ದರು.

error: Content is protected !!