Saturday, November 15, 2025

ಒಂದೇ ವರ್ಷದಲ್ಲಿ ನಾಲ್ಕು ಸಿನಿಮಾ, ವೆಬ್ ಸೀರಿಸ್: ಯಪ್ಪಾ! ಮಾಲಿವುಡ್‌ ಸ್ಟಾರ್ ನಿವಿನ್ ಪೌಲಿ ಫುಲ್ ಬ್ಯುಸಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಲಿವುಡ್‌ ನಟ ನಿವಿನ್ ಪೌಲಿ ಈ ವರ್ಷ ನಿಜಕ್ಕೂ ಸಖತ್ ಬ್ಯುಸಿ. ಸಾಮಾನ್ಯವಾಗಿ ವರ್ಷಕ್ಕೆ ಒಂದೇ ಅಥವಾ ಎರಡು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ನಟ, ಈ ಬಾರಿ ನಾಲ್ಕು ಸಿನಿಮಾಗಳಲ್ಲಿ ಒಂದೇ ಕಾಲದಲ್ಲಿ ಕೆಲಸ ಮಾಡಿದ್ದಾರೆ. ಇದಲ್ಲದೆ, ತಮ್ಮ ಮೊದಲ ವೆಬ್‌ ಸೀರಿಸ್‌ಗೂ ನಟಿಸಿರುವ ನಿವಿನ್, ನಿರ್ಮಾಪಕರ ಪಟ್ಟಲಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಕ್ರಿಸ್ಮಸ್‌ಗೆ ಬಿಡುಗಡೆಗೊಳ್ಳಲಿರುವ ಸರ್ವಂ ಮಾಯ ಹಾರರ್-ಕಾಮಿಡಿ ಸಿನಿಮಾದಲ್ಲಿ ನಿವಿನ್ ಪೌಲಿ ಅಜು ವರ್ಗೀಸ್ ಜೊತೆ ನಟಿಸಿದ್ದಾರೆ. ಅದೇ ರೀತಿ ಬೆತ್ಲೆಹೆಮ್ ಫ್ಯಾಮಿಲಿ ಯುನಿಟ್ ಎಂಬ ರೋಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲೂ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಮಿತಾ ಬೈಜು ಅವರ ಜೋಡಿಯಾಗಿದ್ದಾರೆ.

ಈ ಎರಡರ ಜೊತೆಗೆ ಬೇಬಿ ಗರ್ಲ್ ಎನ್ನುವ ಥ್ರಿಲ್ಲರ್ ಸಿನಿಮಾದಲ್ಲಿ ಮತ್ತು ತಮಿಳು ನಿರ್ದೇಶಕ ರಾಮ್ ನಿರ್ದೇಶನದ ಏಳು ಕಡಲ್ ಏಳು ಮಲೈ ಎಂಬ ರೋಮ್ಯಾಂಟಿಕ್ ಸೈಕೋಲಾಜಿಕಲ್ ಥ್ರಿಲ್ಲರ್‌ನಲ್ಲೂ ನಟಿಸಿದ್ದಾರೆ.

ಅಲ್ಲದೆ, ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ಮಾಣ ಮಾಡುತ್ತಿರುವ ಬೆನ್ಜ್ ಸಿನಿಮಾದಲ್ಲಿ ನಿವಿನ್ ಪೌಲಿ ವಿಶೇಷ ಪಾತ್ರ ‘ವಾಲ್ಟರ್’ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಕೆಲಸಗಳ ನಡುವೆ ಫಾರ್ಮಾ ಹೆಸರಿನ ವೆಬ್‌ ಸೀರಿಸ್ ಕೂಡ ಪೂರ್ಣಗೊಳಿಸಿರುವುದು ಅವರ ಬ್ಯುಸಿನೆಸ್‌ಗೆ ಹೊಸ ಉದಾಹರಣೆ.

ನಟನಷ್ಟೇ ಅಲ್ಲ, ನಿವಿನ್ ಪೌಲಿ ನಿರ್ಮಾಪಕರಾಗಿಯೂ ಸಕ್ರಿಯರಾಗಿದ್ದಾರೆ. ನಯನತಾರಾ ನಟಿಸಿರುವ ಡಿಯರ್ ಸ್ಟುಡೆಂಟ್, ಪ್ಯಾನ್ ಇಂಡಿಯಾ ಸೂಪರ್ ಹೀರೋ ಚಿತ್ರ ಮತ್ತು ಮಲ್ಟಿವರ್ಸ್ ಮನುಮಧನ್ ಸಿನಿಮಾ ಸೇರಿದಂತೆ ಹಲವಾರು ಯೋಜನೆಗಳಿಗೆ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಎಲ್ಲವನ್ನೂ ಸಮತೋಲನವಾಗಿ ನಿರ್ವಹಿಸುತ್ತಿರುವ ನಿವಿನ್ ಪೌಲಿ, ಈ ವರ್ಷ ಮಾಲಿವುಡ್‌ನಲ್ಲಿ ತಮ್ಮದೇ ಆದ ಅಬ್ಬರ ಸೃಷ್ಟಿಸಲಿದ್ದಾರೆ.

error: Content is protected !!