January 30, 2026
Friday, January 30, 2026
spot_img

ಬಸ್ ನಿಲ್ದಾಣದಲ್ಲಿ ಕೈಚಳಕ ತೋರಿದ ನಾಲ್ವರು ಖದೀಮರು ಅರೆಸ್ಟ್!

ಹೊಸದಿಗಂತ ವರದಿ ಬೆಳಗಾವಿ:

ಕಾಗವಾಡ ಬಸ್‌ ನಿಲ್ದಾಣದಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.  ಜನವರಿ ದಿ.19 ರಂದು ಮಹಿಳೆಯ 32 ಗ್ರಾಂ ತೂಕದ 3.20.000 ರೂ. ಬೆಲೆ ಬಂಗಾರದ ಮಂಗಳ ಸೂತ್ರ ಕಳ್ಳತನ ಆಗಿರುವ ಬಗ್ಗೆ ಕಾಗವಾಡ ಪೊಲೀಸ್‌ ಠಾಣೆ ಅಪರಾಧ ಸಂಖ್ಯೆ: 14/2026 ಕಲಂ:- 303[2] ಬಿಎನ್ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

ಪ್ರಕರಣದ ತನಿಖೆ ನಡೆಸಿದ ಕಾಗವಾಡ ಪೊಲೀಸರು ಅಜೇಯ ಮಹೇಂದ್ರ ಜಾವೂರ, ಶ್ರೀಕಾಂತ ದೋಡ್ಡರಪ್ಪಾ ಬಳ್ಳಾರಿ, ಲಿಯಾಕತ್‌ ಮಾಲ ನಧಾಪ್ ಹಾಗೂ ಗಣೇಶ ಪ್ರಕಾಶ ಕದಮ ಎಂಬ ನಾಲ್ವರು ಕಳ್ಳರನ್ನು ಬಂಧಿಸಿದ್ದಾರೆ. 

ಕಳ್ಳರಿಂದ 3.20.000 ರೂ. ಬೆಲೆಯ 32 ಗ್ರಾಂತೂಕದ ಬಂಗಾರದ ಮಂಗಳ ಸೂತ್ರ ಹಾಗೂ ಕಳ್ಳತನಕ್ಕೆ ಉಪಯೋಗಿಸಿದ 7 ಲಕ್ಷ ರೂ‌. ಬೆಲೆಯ ಕಾರ್ ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !