ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಗಲಕೋಟೆಯಲ್ಲಿ ವಿಶೇಷ ಚೇತನ ಹಾಗೂ ಬುದ್ಧಿಮಾಂದ್ಯ ಮಕ್ಕಳ ಮೇಲೆ ಶಿಕ್ಷಕನೊಬ್ಬ ಕ್ರೌರ್ಯ ಮೆರೆದಿದ್ದಾನೆ. ಮಕ್ಕಳ ಕಾಲಿನ ಮೇಲೆ ಕಾಲಿಟ್ಟು ಶಿಕ್ಷಕ ಬೆಲ್ಟ್ ನಿಂದ ಭೀಕರವಾಗಿ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾನೆ.
ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಶಿಕ್ಷಕ ದಂಪತಿಗಳು ಸೇರಿದಂತೆ ಒಟ್ಟು ನಾಲ್ವರನ್ನು ನವನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಾಗಲಕೋಟೆ ನವನಗರದ 45ನೇ ಸೆಕ್ಟರ್ ನಲ್ಲಿ ಇರುವಂತಹ ವಿಶೇಷ ಚೇತನ ಮತ್ತು ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಮಕ್ಕಳ ಕಾಲ ಮೇಲೆ ಕಾಲಿಟ್ಟು ಬೆಲ್ಟ್ನಿಂದ ಭೀಕರವಾಗಿ ಹಲ್ಲೆ ಮಾಡಿದ್ದಾನೆ ಅಕ್ಷಯ್ ಇಂಗಳ್ಕರ್ ಎಂಬ ನೀಚ ಶಿಕ್ಷಕ ಹಲ್ಲೆ ಮಾಡಿದ್ದಾನೆ.
ಬೆಲ್ಟ್, ಪ್ಲಾಸ್ಟಿಕ್ ಪೈಪ್‌ನಿಂದ ಅಕ್ಷಯ್ ಹಲ್ಲೆ ಮಾಡಿದರೆ ಅಕ್ಷಯ್ ಪತ್ನಿ ಮಾಲಿನಿ ಮಕ್ಕಳ ಕಣ್ಣಿಗೆ ಖಾರದ ಪುಡಿ ಎರಚಿದ್ದಾಳೆ.
ನವನಗರ ಪೊಲೀಸರು ಈಗ ಸ್ಥಳಕ್ಕೆ ಆಗಮಿಸಿ ಶಿಕ್ಷಕ ದಂಪತಿಯನ್ನು ವಶಕ್ಕೆ ಪಡೆದಿದ್ದಾರೆ. ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ಅಧಿಕಾರಿ ಸಹ ಹಾಜರಾಗಿದಾರೆ. ಬಾಗಲಕೋಟೆ ಎಸ್.ಪಿ ಸಿದ್ದಾರ್ಥ ಗೋಯಲ್ ಈಗ ವಿಚಾರಣೆ ನಡೆಸುತ್ತಿದ್ದಾರೆ.

