March 3, 2026
Tuesday, March 3, 2026
spot_img

ರಾಯಚೂರಿನಲ್ಲಿ ಕೆಕೆಆರ್‌ಟಿಸಿ ಬಸ್ ಹರಿದು ನಾಲ್ಕು ವರ್ಷದ ಮಗು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮದರಕಲ್ ಗ್ರಾಮದಲ್ಲಿ ಕೆಕೆಆರ್‌ಟಿಸಿ ಬಸ್ ಹರಿದು ನಾಲ್ಕು ವರ್ಷದ ಹೆಣ್ಣುಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.

ಗಬ್ಬೂರು ಗ್ರಾಮದ ವಿದ್ಯಾಶ್ರೀ ಮೃತ ಬಾಲಕಿ . ಸಾರಿಗೆ ಬಸ್ ಗಬ್ಬೂರಿನಿಂದ ದೇವದುರ್ಗಕ್ಕೆ ತೆರಳುತ್ತಿತ್ತು. ಈ ವೇಳೆ ಅಚಾನಕ್ಕಾಗಿ ಅಡ್ಡ ಬಂದ ಕಾರಣ ಮಗುವಿನ ಮೇಲೆ ಬಸ್ ಹರಿದು ದುರ್ಘಟನೆ ಸಂಭವಿಸಿದೆ.

ಬಸ್ ಬರುವುದನ್ನು ಗಮನಿಸದೆ ಮಗು ರಸ್ತೆ ದಾಟಲು ಮುಂದಾದಾಗ ಅಪಘಾತ ನಡೆದಿದೆ. ಧಿಡೀರ್ ಆಗಿ ಅಡ್ಡ ಬಂದ ಕಾರಣ ಬಸ್ಸಿನ ಚಕ್ರದಡಿಗೆ ಸಿಲುಕಿ ಮಗು ಮೃತಪಟ್ಟಿದೆ. ಘಟನೆ ಸಂಬಂಧ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !