ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿ ಐಕ್ಯತಾ ವೇದಿಕೆ ಬೆಂಗಳೂರು ಇವರ 4ನೇ ವಾರ್ಷಿಕ ಸಂದರ್ಭದಲ್ಲಿ ರಕ್ತದಾನ ಶಿಬಿರ ಮತ್ತು ಮಾದಕ ವ್ಯವಸನದ ವಿರುದ್ಧ ಜನ ಜಾಗೃತಿ ಎಂಬ ಕಾರ್ಯಕ್ರಮದದೊಂದಿಗೆ ವಾರ್ಷಿಕೊತ್ಸವವನ್ನು ವಿಶಿಷ್ಟ ಆಚರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾರಿಸ್ ಪಿ.ಎಂ. ವಹಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಗಣ್ಯ ಅತಿಥಿಗಳನ್ನು ಅಶ್ರಫ್ ಕೊಕ್ಕಡ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಡಾ. ರೂಪೇಶ್ ರವರು ಇಂದಿನ ಯುವ ಪೀಳಿಗೆಯು ಹೆಚ್ಚಾಗಿ ಮಾದಕ ವ್ಯಸನಿಗಳಾಗುತ್ತಿದ್ದಾರೆ ಅದಕ್ಕೆ ಏನು ಕಾರಣ ಅದನ್ನು ಅವರಿಂದ ಹೇಗೆ ದೂರವಿರಿಸಬೇಕು ಎಂಬುದರ ಬಗ್ಗೆ ಸವಿಸ್ತಾರವಾಗಿ ಸಮಾಜಕ್ಕೆ ತಿಳಿಸಿದರು.
38 ಯುನಿಟ್ ರಕ್ತ ಸಂಗ್ರಹ:
ರಕ್ತದಾನ ಮಾಡಿ ಜೀವ ಉಳಿಸಿ ಎಂಬ ಧ್ಯೇಯ ವಾಕ್ಯವನ್ನು ಉಚ್ಛರಿಸುವ ಮೂಲಕ ರಕ್ತದಾನ ಮಾಡಲು ಯುವ ಜನರನ್ನು ಪ್ರೇರೇಪಿಸಿದರು. ತದನಂತರ ಮಾತನಾಡಿದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬೆಂಗಳೂರು ಸಲಹೆಗಾರ್ತಿ ರೇಷ್ಮ ರೈ ರಕ್ತದಾನದ ಮಹತ್ವವನ್ನು ತಿಳಿಸುವುದರ ಮೂಲಕ ಸುಮಾರು 38 ಯುನಿಟ್ ರಕ್ತ ಸಂಗ್ರಹ ಮಾಡುವಲ್ಲಿ ಅವರ ನುಡಿಗಳಲ್ಲಿ ಸಾಧ್ಯವಾಯಿತು.
ಯುವ ಜನತೆ ರಕ್ತದಾನಕ್ಕೆ ಮುಂದಾಗಿ:
ಅದೇ ರೀತಿ ಅಬೂಬಕರ್.ಹೆಚ್ MMYC ,ಯುವ ಜನತೆ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ತಿಳಿ ಹೇಳಿದರು. ತದ ನಂತರ ಡಾ. ನರೇಶ್ ಬಾಬು,ಪ್ರವೀಣ್ ಜಾನ್ಸ್, ಅಬ್ದುಲ್ ರಝಾಕ್ ಹಾಗೂ ಶಬೀರ್ ಬ್ರಿಗೇಡ್ ಮತ್ತು ಇನ್ನಿತರ ಗಣ್ಯ ಅತಿಥಿಗಳು ಭಾಗವಹಿಸಿ ಹಿತೋಪದೇಶಗಳನ್ನು ನೀಡಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯ ಅತಿಥಿಗಳಿಗೆ ಸ್ಮರಣಿಕೆ ಕೊಟ್ಟು ಸನ್ಮಾನಿಸಲಾಯಿತು. ಮತ್ತು ರಕ್ತದಾನಿಗಳಿಗೆ ಸರ್ಟಿಫಿಕೇಟ್ ಕೊಟ್ಟು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಈ ಕಾರ್ಯಕ್ರಮದ ಸಾಮಾಜಿಕ ಜಾಲತಾಣ ಮೂಲಕ ಹೆಚ್ಚಿನವರಿಗೆ ತಿಳಿಸಲು ಮಾಧ್ಯಮ ಸಲಹೆಗಾರರಾದ ಅಲಿ ಬೆಂಗಳೂರು ಅವರು ನಿರಂತರ ಕಾರ್ಯಪ್ರವತರಾಗಿದ್ದರು. ಮತ್ತು ಕಾರ್ಯಕ್ರಮದ ನಿರೂಪಣೆಯನ್ನು ಇರ್ಫಾನ್ ಕಲ್ಲಡ್ಕ ಬಹಳ ಅಚ್ಚು ಕಟ್ಟಾಗಿ ನಿರೂಪಿಸಿ ಕಾರ್ಯಕ್ರಮವನ್ನು ಸಮಾಪ್ತಿ ಗೊಳಿಸಲಾಯಿತು.

