Friday, December 26, 2025

ಹಂಪಿಯಲ್ಲಿ ಗುಡ್ಡ ಹತ್ತೋಕೆ ಹೋಗಿ ಬಿದ್ದ ಫ್ರಾನ್ಸ್‌ ಪ್ರಜೆ ಎರಡು ದಿನದ ನಂತರ ಆಸ್ಪತ್ರೆಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗುಡ್ಡದಿಂದ ಕಾಲು ಜಾರಿ ಬಿದ್ದು ಎರಡು ದಿನ ನಿರ್ಜನ ಪ್ರದೇಶದಲ್ಲಿದ್ದ ವಿದೇಶಿ ಪ್ರಜೆಯನ್ನು  ರಕ್ಷಣೆ ಮಾಡಲಾಗಿದೆ. ಹಂಪಿ ಅಷ್ಟಭುಜ ಸ್ನಾನ ಗುಡ್ಡದ ಹಿಂಭಾಗದಲ್ಲಿ ವಿದೇಶಿ ಪ್ರಜೆಯೊಬ್ಬರು ಗುಡ್ಡ ಹತ್ತುವಾಗ ಜಾರಿ ಬಿದ್ದಿದ್ದರು.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರೋ ಐತಿಹಾಸಿಕ ಹಂಪಿಯ ಅಷ್ಟಭುಜ ಸ್ನಾನ ಗುಡ್ಡ ಹತ್ತುವಾಗ ಜಾರಿ ಬಿದ್ದಿದ್ದರು. ಪ್ರಾನ್ಸ್‌‌ ದೇಶದ ಬ್ರೋನೋ ರೋಜರ್ (52) ಗುಡ್ಡ ಹತ್ತಲು ಹೋಗಿ ಕಾಲು ಜಾರಿ ಬಿದ್ದ ವ್ಯಕ್ತಿ. ನಿರ್ಜನ ಪ್ರದೇಶದಲ್ಲಿ ಕಾಲು ಮುರಿದುಕೊಂಡು ‌ ಬಿದ್ದು ರಕ್ತಸ್ರಾವದಿಂದ‌ ನರಳಾಡುತ್ತಿದ್ದ ವಿದೇಶಿ ಪ್ರಜೆ ಬ್ರೋನೋ ರೋಜರ್‌ಗೆ ಕಾಲಿಗೆ ತೀವ್ರವಾಗಿ ಪೆಟ್ಟು ಬಿದ್ದು ನಡೆದಾಡಲು ಆಗುತ್ತಿರಲಿಲ್ಲ. 

ಎರಡು ದಿನಗಳ ಕಾಲ ಗುಡ್ಡದ ಹಿಂಭಾಗದಲ್ಲೇ  ವಿದೇಶಿ ಪ್ರಜೆ  ಬ್ರೋನೋ  ರೋಜರ್ ಕಾಲ ಕಳೆದಿದ್ದಾರೆ. ಬಳಿಕ ಬಾಳೆ ತೋಟದ‌ ಬಳಿ ತೆವಳಿಕೊಂಡು‌ ಬಂದಿದ್ದರು. ಇಂದು ವಿದೇಶಿ ಪ್ರಜೆ ಕಂಡು ಪುರಾತತ್ವ ಇಲಾಖೆ,‌ ಪೊಲೀಸ್ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.

ಅಂಬ್ಯುಲೆನ್ಸ್ ಕರೆಸಿ ವಿದೇಶಿ ಪ್ರಜೆಯನ್ನ ಕೊಪ್ಪಳ ಜಿಲ್ಲಾಸ್ಪತ್ರೆಗೆ‌ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.  ಡಿಸೆಂಬರ್‌ 24 ರಂದು ಗುಡ್ಡದ ಹತ್ತಲು ಹೋಗಿ ಕಾಲು‌ ಜಾರಿ‌ ಬಿದ್ದಿದ್ದವನನ್ನು  ಇಂದು ರಕ್ಷಣೆ ಮಾಡಲಾಗಿದೆ. 

error: Content is protected !!