ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಕೆಲದಿನಗಳ ಒತ್ತಡ ಇಂದು ನಿವಾರಣೆ. ಕುಟುಂಬ ಸದಸ್ಯರ ಜತೆ ಕಾಲ ಕಳೆಯುವ ಅವಕಾಶ. ನಿಮ್ಮ ಗುರಿಯೊಂದು ಬೇಗನೆ ಈಡೇರಲಿದೆ.
ವೃಷಭ
ಅನವಶ್ಯ ಚಿಂತೆ ತಲೆಗೆ ಹಚ್ಚಿಕೊಳ್ಳದಿರಿ. ಸ್ವಹಿತಾಸಕ್ತಿಗೆ ಆದ್ಯತೆ ಕೊಡಿ. ಕುಟುಂಬ ಸದಸ್ಯರ ಜತೆ ವಾಗ್ವಾದ ನಡೆಸಬೇಡಿ. ಕೌಟುಂಬಿಕ ನೆಮ್ಮದಿ ಕಾಪಾಡಿ.
ಮಿಥುನ
ಕೆಲವು ಬಗೆಯ ಒತ್ತಡ, ಸಮಸ್ಯೆ. ಮಧ್ಯಾಹ್ನದ ವೇಳೆ ಸುಸೂತ್ರ, ನಿರಾಳತೆ. ಸಣ್ಣ ವಿಷಯಕ್ಕೂ ಅತಿಯಾಗಿ ಚಿಂತೆ ಮಾಡದಿರಿ.
ಕಟಕ
ಹಳೆಯ ತಪ್ಪಿನಿಂದ ಪಾಠ ಕಲಿಯಿರಿ. ಇತ್ತೀಚಿನ ನಿರಾಶೆ ಮರೆತು ಹೊಸತನಕ್ಕೆ ಕಾಲಿಡಿ. ಅತಿವೇಗದ ವಾಹನ ಚಾಲನೆ ನಿಯಂತ್ರಿಸಿ. ಧನವ್ಯಯ.
ಸಿಂಹ
ಆತ್ಮೀಯ ಸಂಬಂಧ ಹಾಳಾಗಲು ಅವಕಾಶ ಕೊಡಬೇಡಿ. ನಿಮ್ಮ ಸಮಸ್ಯೆಗೆ ಶೀಘ್ರ ಪರಿಹಾರ ಸಿಗಲಿದೆ. ಆಶಾವಾದಿಯಾಗಿರಿ.
ಕನ್ಯಾ
ನಿಮ್ಮ ಸುತ್ತ ಉತ್ಸಾಹದ ವಾತಾವರಣ. ಸಂಗಾತಿಯಿಂದ ಅಚ್ಚರಿಯ ಕೊಡುಗೆ. ಮಾನಸಿಕ ನೆಮ್ಮದಿ ಕಾಯಲು ಗಮನ ಕೊಡಿ.
ತುಲಾ
ವೃತ್ತಿಯಲ್ಲಿ ಫಲಪ್ರದ ದಿನ. ಸಂಗಾತಿ ಜತೆಗಿನ ಭಿನ್ನಮತ ಪರಿಹಾರ. ಬಂಧುಗಳ ಭೇಟಿ. ಖರ್ಚು ನಿಯಂತ್ರಣದಲ್ಲಿ ಹಿಡಿತ ಸಾಧಿಸುವಿರಿ.
ವೃಶ್ಚಿಕ
ಸವಾಲು ನಿಮ್ಮ ಮುಂದಿದೆಯೆ? ಹೃದಯದ ಮಾತು ಕೇಳಿ. ಆಪ್ತರ ಜತೆ ಭಿನ್ನಮತಕ್ಕೆ ಆಸ್ಪದ ನೀಡದಿರಿ. ಹಣದ ಕೊರತೆ ಕಾಡಬಹುದು.
ಧನು
ಮನೆಯಲ್ಲಿ ಮೂಡಿದ್ದ ಉದ್ವಿಗ್ನತೆ ಶಮನ. ವಿರಸ ಮಾಯ. ವಿವಾಹಾಕಾಂಕ್ಷಿಗಳಿಗೆ ಪೂರಕ ಸುದ್ದಿ. ಉದ್ಯೋಗದಲ್ಲಿ ಉನ್ನತಿ.
ಮಕರ
ಸಂಬಂಧದಲ್ಲಿ ಅಪಸ್ವರ ಏಳದಂತೆ ಎಚ್ಚರ ವಹಿಸಿ. ಹೊಸ ವ್ಯವಹಾರ ಆರಂಭಿಸುವ ಮುನ್ನ ಯೋಚಿಸಿರಿ. ದೈಹಿಕ ನೋವು ಬಾಧಿಸಬಹುದು.
ಕುಂಭ
ಇಂದು ಬಿಡುವು ಸಿಗದು. ಏನಾದರೊಂದು ಕೆಲಸ ಬೆನ್ನು ಬಿಡದು. ಆತ್ಮೀಯ ಮಿತ್ರರ ಜತೆ ಕಾಲಕ್ಷೇಪ. ಕೌಟುಂಬಿಕ ಸಮಸ್ಯೆ ಮರೆಯುವಿರಿ.
ಮೀನ
ವೃತ್ತಿ ಮತ್ತು ಕುಟುಂಬದ ಮಧ್ಯೆ ಹೊಂದಾಣಿಕೆ ಮಾಡಲು ಸಫಲರಾಗುವಿರಿ. ಆಪ್ತರ ವಿರೋಧ ಕಟ್ಟಿಕೊಳ್ಳದಿರಿ.

